ಸೀನಿಯರ್ ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿ; ಸೌರಭ್ ವರ್ಮಾ, ರಿತುಪರ್ಣ ದಾಸ್ ಚಾಂಪಿಯನ್

ಹೊಸದಿಲ್ಲಿ,ಫೆ.7: ಇಲ್ಲಿ ನಡೆದ ಸೀನಿಯರ್ ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಪುರುಷರ ವಿಭಾಗದಲ್ಲಿ ಸೌರಭ್ ವರ್ಮ ಮತ್ತು ಮಹಿಳೆಯರ ವಿಭಾಗದಲ್ಲಿ ರಿತುಪರ್ಣ ದಾಸ್ ಚಾಂಪಿಯನ್ ಆಗಿ ಟ್ರೋಫಿ ಎತ್ತಿಕೊಂಡಿದ್ಧಾರೆ.
ಸೌರಭ್ ವರ್ಮ ಅವರು ಹದಿನೈದರ ಹರೆಯದ ಲಕ್ಷಯ ಸೇನ್ ವಿರುದ್ಧ 21-13, 21-12 ಅಂತರದಲ್ಲಿ ಜಯ ಗಳಿಸಿದರು.
ಸೇನ್ ಅವರು ವರ್ಲ್ಡ್ ಫೆಡರೇಶನ್ ಜೂನಿಯರ್ ರ್ಯಾಂಕಿಂಗ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ. ಅವರು ಎಚ್.ಎಸ್ .ಪ್ರಣಯ್, ಹರ್ಷೇಲ್ ದಾನಿ ಅವರಿಗೆ ಸೋಲುಣಿಸಿ ಫೈನಲ್ ತಲುಪಿದ್ದರು.
ಸೌರಭ್ ಅವರು ಟೂರ್ನಮೆಂಟ್‌ನಲ್ಲಿ 3ನೆ ಶ್ರೇಯಾಂಕದೊಂದಿಗೆ ಆಟ ಆರಂಭಿಸಿದ್ದರು. ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಸಮೀರ್ ವರ್ಮ ಅವರಿಗೆ ಸೋಲುಣಿಸಿದ್ದರು.
24ರ ಹರೆಯದ ವರ್ಮ ಅವರಿಗೆ ಫೈನಲ್‌ನಲ್ಲಿ ಸೇನ್ ವಿರುದ್ಧ ಕಠಿಣ ಸವಾಲು ಎದುರಾಗಲಿಲ್ಲ. ಸೇನ್ ಅವರು ಈ ವರ್ಷದ ಆರಂಭದಲ್ಲಿ ಜೂನಿಯರ್ ನ್ಯಾಶನಲ್ ಚಾಂಪಿಯನ್ ಆಗಿದ್ದರು.
ಸೇನ್ ಅವರು ಸೋಲಿನೊಂದಿಗೆ ಪ್ರಕಾಶ್ ಪಡುಕೋಣೆ ಅವರ ದಾಖಲೆ ಸರಿಗಟ್ಟುವ ಅವಕಾಶ ವಂಚಿತಗೊಂಡರು. ಪಡುಕೋಣೆ ಅವರು 16ರ ಹರೆಯದಲ್ಲಿ ಜೂನಿಯರ್ ಹಾಗೂ ಸೀನಿಯರ್ ಚಾಂಪಿಯನ್ ಆಗಿದ್ದರು.
ರಿತುಪರ್ಣ ದಾಸ್ ಅವರು ಮಹಿಳೆಯರ ವಿಭಾಗದಲ್ಲಿ ರೇಷ್ಮಾ ಕಾರ್ತಿಕ್ ವಿರುದ್ಧ 21-12, 21-14 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಬಾಚಿಕೊಂಡರು.
ಮಹಿಳೆಯರ ಡಬಲ್ಸ್‌ನಲ್ಲಿ ಅಪರ್ಣ ಬಾಲನ್ ಮತ್ತು ಪ್ರಜಕ್ತಾ ಸಾವಂತ್ ಅವರು ಶಿಖಾ ಗೌತಮ್ ಮತ್ತು ಸಾನ್ಯೊಗಿತಾ ಘೋರ್ಪಡೆ ವಿರುದ್ಧ 21-9, 21-11 ಅಂತರದಲ್ಲಿ ಜಯ ಸಾಧಿಸಿದರು.
ಪುರಷರ ಡಬಲ್ಸ್‌ನಲ್ಲಿ ನಂದ ಗೋಪಾಲ್ ಕೆ ಮತ್ತು ಸಾನ್ಯಮ್ ಶುಕ್ಲಾ ಅವರಿಗೆ 17-21, 21-16, 14-21 ಅಂತರದಲ್ಲಿ ಸೋಲುಣಿಸಿದ ಸಾತ್ವಿಕ್ ಸಾಯಿ ರಾಜ್ ಮತ್ತು ಚಿರಾಗ್ ಶೆಟ್ಟಿ ಟ್ರೋಫಿ ಎತ್ತಿದರು.
,,,,,,,,,,,,,





