ಸತ್ಯಾರ್ಥಿಯ ನೊಬೆಲ್ ಪ್ರಮಾಣಪತ್ರ ಕಳವು
ಹೊಸದಿಲ್ಲಿ,ಫೆ.7: ದಕ್ಷಿಣ ದಿಲ್ಲಿಯಲ್ಲಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿಯವರ ನಿವಾಸದಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು, ಅವರ ನೊಬೆಲ್ ಪ್ರಮಾಣಪತ್ರ ಕಳ್ಳರ ಪಾಲಾಗಿದೆ.
ಸತ್ಯಾರ್ಥಿ ಸದ್ಯ ಲ್ಯಾಟಿನ್ ಅಮೆರಿಕದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರ ವಿಶ್ವ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.
ಬಾಲ ಕಾರ್ಮಿಕ ಪಿಡುಗನ್ನು ಅಂತ್ಯಗೊಳಿಸಲು ಮತ್ತು ಅಪ್ರಾಪ್ತ ವಯಸ್ಕ ಮಕ್ಕಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಬಚ್‌ಪನ್ ಬಚಾವೋ ಆಂದೋಲನ್‌ನ ಸ್ಥಾಪಕರಾಗಿರುವ ಸತ್ಯಾರ್ಥಿ 2014ರಲ್ಲಿ ನೊಬೆಲ್ ಶಾಂತಿ ಪುರಸ್ಕಾರವನ್ನು ಪಾಕಿಸ್ತಾನದ ಮಹಿಳಾ ಶಿಕ್ಷಣ ಪ್ರತಿಪಾದಕಿ ಮಲಾಲಾ ಯೂಸುಫ್‌ಝಾಯಿ ಅವರೊಂದಿಗೆ ಹಂಚಿಕೊಂಡಿದ್ದರು.
Next Story





