ಫಳ್ನೀರ್ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ
ಮಂಗಳೂರು, ಫೆ.8: ಫಳ್ನೀರ್ ಎವ್ರಿ ಸರ್ಕಲ್ನಿಂದ ಫಾದರ್ ಮುಲ್ಲರ್ಸ್ ಆಸ್ಪತ್ರೆಯವರೆಗಿನ 1.15 ಕಿ.ಮೀ. ಉದ್ದದ ಕಾಂಕ್ರಿಟ್ ರಸ್ತೆಯ ಕಾಮಗಾರಿಗೆ ಶಾಸಕ ಜೆ.ಆರ್.ಲೋಬೊ ಶಿಲಾನ್ಯಾಸ ನೆರವೇರಿಸಿದರು.
ಸುಮಾರು 3.9 ಕೋ.ರೂ. ವೆಚ್ಚದ ಈ ರಸ್ತೆ ಕಾಂಕ್ರಿಟೀಕರಣಗೊಂಡರೆ ವಾಹನ ಸಂಚಾರ ಸುಗಮವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಹರಿನಾಥ್, ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಆಯುಕ್ತ ಮುಹಮ್ಮದ್ ನಝೀರ್, ಕಾರ್ಪೊರೇಟರ್ಗಳಾದ ನವೀನ್ ಡಿಸೋಜ, ಅಬ್ದುಲ್ ರವೂಫ, ಅಪ್ಪಿ, ಅಬ್ದುಲ್ ಲತೀಫ್, ಆಶಾ ಡಿಸಿಲ್ವಾ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ಅಹ್ಮದ್ ಬಾವ ಬಜಾಲ್, ಮನಪಾ ಅಧಿಕಾರಿಗಳಾದ ಲಿಂಗೇಗೌಡ, ಗಣಪತಿ ಮುಂತಾದವರು ಉಪಸ್ಥಿತರಿದ್ದರು.
Next Story