ಮೂಡುಬಿದಿರೆ 34 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ : ಮುಖ್ಯಮಂತ್ರಿಯಿಂದ ಭರವಸೆ

ಮೂಡುಬಿದಿರೆ,ಫೆ.8 : ಹಲವು ಸಮಯಗಳಿಂದ ನೆನಗುದಿಗೆ ಬಿದ್ದಿದ್ದ ಮೂಡುಬಿದಿರೆಯ ಒಳಚರಂಡಿ ಯೋಜನೆ ಕುರಿತು ಮೂಡುಬಿದಿರೆ ಶಾಸಕ ಅಭಯಚಂದ್ರರೊಂದಿಗೆ ಸ್ಥಳೀಯ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿ ಮನವಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ 34 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಒಳಚರಂಡಿ ಯೋಜನೆಗೆ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
ಇದೇ ಸಂದರ್ಭದಲ್ಲಿ ಕಂಬಳ ಕುರಿತಂತೆ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹಾಗೂ ಪಶುಸಂಗೋಪನಾ ಸಚಿವ ಮಂಜು ನೇತೃತ್ವದಲ್ಲಿ ಸಭೆ ನಡೆದಿದ್ದು, ಫೆ. 9ರಂದು ನಡೆವ ವಿಧಾನಸಭಾ ಆಧಿವೇಶನದಲ್ಲಿ ಕಂಬಳಕ್ಕೆ ವಿಧೇಯಕ ಮಂಡನೆ ಸಿಗಲಿದೆ ಎಂದು ಶಾಸಕ ಅಭಯಚಂದ್ರ ಅವರು ತಿಳಿಸಿದ್ದಾರೆ.
ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ, ಸದಸ್ಯರಾದ ಪಿ.ಕೆ. ಥೋಮಸ್, ಸುರೇಶ್ ಕೋಟ್ಯಾನ್, ಸುಪ್ರಿಯಾ ಡಿ. ಶೆಟ್ಟಿ, ಕೊರಗಪ್ಪ, ವನಿತಾ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ವಿಜಯಕುಮಾರ್ ಕಂಗಿನಮನೆ ನಿಯೋಗದಲ್ಲಿದ್ದರು.
Next Story





