ಮುಂಡಳ್ಳಿಯ ವ್ಯಕ್ತಿ ಕಾಣೆ: ದೂರು ದಾಖಲು

ಭಟ್ಕಳ, ಫೆ.8: ಹೊರಗೆ ಹೋಗುವುದಾಗಿ ಹೇಳಿಕೊಂಡು ಕಳೆದ ಜ.24ರಂದು ಮನೆಯಿಂದ ಹೊರಗೆ ಹೋದ ವ್ಯಕ್ತಿಯೋರ್ವರು ಮನೆಗೆ ಹಿಂದಿರುಗದೇ ಕಾಣೆಯಾಗಿರುವ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ಕಾಣೆಯಾಗಿರುವ ವ್ಯಕ್ತಿಯನ್ನು ತಾಲೂಕಿನ ಮುಂಡಳ್ಳಿ ನೀರಗದ್ದೆ ನಿವಾಸಿ, ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಕೃಷ್ಣ ತಂದೆ ರಾಮಾ ನಾಯ್ಕ (33) ಎಂದು ಗುರುತಿಸಲಾಗಿದೆ. ಸಾದಾ ಮೈಕಟ್ಟು, ದುಂಡನೆಯ ಮುಖ, ಎಡಗೈ ಮೇಲೆ ಹಳೆಯ ಗಾಯದ ಗುರುತನ್ನು ಹೊಂದಿರುವ ಇವರು, ಕನ್ನಡ, ಹಿಂದಿ, ಕೊಂಕಣಿ ಭಾಷೆಯನ್ನು ಬಲ್ಲವನಾಗಿದ್ದಾರೆ. ಈ ಸಂಬಂಧ ಆತಂಕಕ್ಕೆ ಒಳಗಾಗಿರುವ ಇವರ ಪತ್ನಿ ಸವಿತಾ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
Next Story





