ಕಾಲೇಜು ಕ್ಯಾಂಪಸ್‌ನಲ್ಲೇ ಹಲ್ಲೆ

ಬ್ರಹ್ಮಾವರ, ಫೆ.8: ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಅದೇ ಕಾಲೇಜಿನ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.7ರಂದು ಬೆಳಗ್ಗೆ ಸಾಸ್ತಾನದ ನಿತೇಶ್ ಕುಮಾರ್(18) ತರಗತಿಗೆ ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿಗಳಾದ ನಿರೀಕ್ಷಿತ, ಮಯೂರ, ಅಶ್ವಿನ್, ಅಂಕಿತ, ರಾಘವೇಂದ್ರ, ಗೌತಮ್, ಶ್ರೇಯರಾಜ ಎಂಬವರು ತಡೆದು ನಿಲ್ಲಿಸಿ ಕೈ ಯಿಂದ ಹೊಡೆದು ಗಾಯಗೊಳಿಸಿದ್ದಾರೆ. ಅಲ್ಲದೆ ನಿತೇಶ್ ಕುಮಾರ್ ಜೊತೆಯಲ್ಲಿದ್ದ ದೀಪಕ್, ಸಚಿನ್, ವಾಸುಕೀ ಎಂಬವರಿಗೂ ಏಕಾ ಏಕಿ ಹಲ್ಲೆ ನಡೆಸಲಾಗಿದೆ.
ಫೆ.6ರಂದು ನಡೆದ ಕಂಬಳದ ಮೆರವಣಿಗೆಯಲ್ಲಿ ಗುರಾಯಿಸಿದರೆಂದು ತಪ್ಪುತಿಳಿದುಕೊಂಡು ಈ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ.
Next Story





