ಬಾಲಕಿ ಸಾವು ಪ್ರಕರಣ
ಕಾಫಿ ತೋಟದ ಮಾಲಕನ ಬಂಧನ
ಚಿಕ್ಕಮಗಳೂರು, ಫೆ.8: ಇತ್ತೀಚೆಗೆ ಕಳಸ ಬಳಿಯ ಇಡಕಣಿ ಗ್ರಾಮದ ಕಾಫಿ ತೋಟದಲ್ಲಿ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಮೂಲದ ವನಜಾಕ್ಷಿ (13) ಎಂಬ ಬಾಲಕಿಯು ಕಳೆನಾಶಕ ರಾಸಾಯನಿಕ ಸಿಂಪಡಣೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ತೋಟದ ಮಾಲಕನ ಮೇಲೆ ಪ್ರಕರಣವನ್ನು ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಕ್ರಮ ಜರಗಿಸಲಾಗಿದೆ.
ಆಪಾದಿತ ತೋಟದ ಮಾಲಕನನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಚಿಕ್ಕಮಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರ ಪ್ರಕಟನೆ ತಿಳಿಸಿದೆ.
Next Story





