ಡಿಜಿಟಲ್ ವಹಿವಾಟು: 117.4 ಕೋ.ರೂ. ಬಹುಮಾನ ಹಂಚಿಕೊಂಡವರ ಸಂಖ್ಯೆ 7.6ಲಕ್ಷ
ಹೊಸದಿಲ್ಲಿ,ಫೆ.8: 2017,ಫೆ.7ಕ್ಕೆ ಇದ್ದಂತೆ ಲಕ್ಕಿ ಗ್ರಾಹಕ್ ಯೋಜನೆ ಮತ್ತು ಡಿಜಿಧನ್ ವ್ಯಾಪಾರ್ ಯೋಜನೆಗಳಡಿ ಡಿಜಿಟಲ್ ವಹಿವಾಟು ನಡೆಸಿರುವ 7.6 ಲಕ್ಷಕ್ಕೂ ಅಧಿಕ ಗ್ರಾಹಕರು ಮತ್ತು ವ್ಯಾಪಾರಿಗಳು 117.4 ಕೋ.ರೂ.ಗಳ ಬಹುಮಾನ ಹಣವನ್ನು ಗೆದ್ದುಕೊಂಡಿದ್ದಾರೆ ಎಂದು ನೀತಿ ಆಯೋಗವು ಇಂದು ತಿಳಿಸಿದೆ.
ಈ ಯೋಜನೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಆಯೋಗವು, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಮತ್ತು ಕರ್ನಾಟಕ ಗರಿಷ್ಠ ಸಂಖ್ಯೆಯಲ್ಲಿ ವಿಜೇತರನ್ನು ಹೊಂದಿರುವ ಐದು ಅಗ್ರ ರಾಜ್ಯಗಳಾಗಿವೆ ಎಂದು ಹೇಳಿದೆ. ಹೆಚ್ಚಿನ ಬಹುಮಾನ ವಿಜೇತರು 21-30 ವರ್ಷಗಳ ವಯೋಮಾನದ ಗುಂಪಿಗೆ ಸೇರಿದವರಾಗಿದ್ದಾರೆ.
ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು 2016,ಡಿ.25ರಂದು ಆರಂಭಗೊಂಡ ಈ ಯೋಜನೆಗಳು 2017,ಎ.14ರವರೆಗೆ ಚಾಲ್ತಿಯಲ್ಲಿರಲಿವೆ.
Next Story





