ಇಸ್ರೋದಿಂದ ಟೆಲಿಮೆಟ್ರಿ ಮತ್ತು ಟೆಲಿಕಮಾಂಡ್ ಪ್ರಾಸೆಸರ್ ಅಭಿವೃದ್ಧಿ
ಬೆಂಗಳೂರು,ಫೆ.8: ದೇಶೀಯವಾಗಿ ಟೆಲಿಮೆಟ್ರಿ ಮತ್ತು ಟೆಲಿಕಮಾಂಡ್ ಪ್ರಾಸೆಸರ್(ಟಿಟಿಸಿಪಿ) ಅನ್ನು ಅಭಿವೃದ್ಧಿಗೊಳಿಸುವ ಕನಸು ಸಾಕಾರಗೊಂಡಿದ್ದು, ಭಾರತೀಯ ಕೈಗಾರಿಕಾ ರಂಗದ ನೆರವಿನೊಂದಿಗೆ ಅದರ ಉತ್ಪಾದನೆಯನ್ನು ಆರಂಭಿಸಲಾಗುವುದು ಎಂದು ಇಸ್ರೋ ಇಂದು ತಿಳಿಸಿದೆ.
ಮೇಕ್ ಇನ್ ಇಂಡಿಯಾ ಅಭಿಯಾನದಡಿ ಇಸ್ರೋ ಟಿಟಿಸಿಪಿಯ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದ್ದು, ಇದು ದುಬಾರಿ ಆಮದು ಉಪಕರಣದ ಅನಿವಾರ್ಯತೆಯನ್ನು ನಿವಾರಿಸಲಿದೆ ಎಂದು ಅದು ಹೇಳಿದೆ.
Next Story





