ಪನ್ನೀರ್‌ಸೆಲ್ವಂರಿಂದ ಮೋದಿ ಸರಕಾರದ ಗುಣಗಾನ!
ಚೆನ್ನೈ,ಫೆ.8: ಶಶಿಕಲಾ ವಿರುದ್ಧ ಸಿಡಿದೇಳಲು ತನಗೆ ಬಿಜೆಪಿ ಕುಮ್ಮಕ್ಕು ನೀಡಿಲ್ಲವೆಂದು ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಇಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕೇಂದ್ರದ ಎನ್‌ಡಿಎ ಸರಕಾರ ತನಗೆ ನೀಡಿದ ಸಹಕಾರವನ್ನು ಪ್ರಶಂಸಿಸಿದ ಅವರು, ರವಿವಾರ ತಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರೂ, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಕೇಂದ್ರ ಸರಕಾರ ತನ್ನನ್ನು ಕೇಳಿಕೊಂಡ ಆನಂತರವೇ ತಾನು ಅಧಿಕಾರದಲ್ಲಿ ಮುಂದುವರಿದಿರುವುದಾಗಿ ಅವರು ತಿಳಿಸಿದರು.
ಡಿಸೆಂಬರ್‌ನಲ್ಲಿ ಜಯಲಲಿತಾ ನಿಧನದ ಬಳಿಕ ಅವರ ಶೋಕತಪ್ತ ಕೋಟ್ಯಂತರ ಬೆಂಬಲಿಗರನ್ನು ನಿಭಾಯಿಸುವಲ್ಲಿ ಹಾಗೂ ತೀರಾ ಇತ್ತೀಚೆಗೆ ಜಲ್ಲಿಕಟ್ಟು ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದಲ್ಲಿ ಕಾನೂನು, ಶಿಸ್ತನ್ನು ಕಾಪಾಡುವಲ್ಲಿ ತನ್ನ ಸಾಧನೆಯನ್ನು ಕೇಂದ್ರ ಪ್ರಶಂಸಿಸಿರುವುದಾಗಿ ಪನ್ನೀರ್ ತಿಳಿಸಿದರು.
ಶಶಿಕಲಾ ಅವರಿಗಿಂತ ಒ.ಪನ್ನೀರ್‌ಸೆಲ್ವಂ ತಮಿಳು ನಾಡಿನ ಮುಖ್ಯಮಂತ್ರಿಯಾಗಿ ಮುಂದುವರಿ ಯುವುದಕ್ಕೆ ಬಿಜೆಪಿ ಒಲವು ವ್ಯಕ್ತಪಡಿಸಿತ್ತೆನ್ನಲಾಗಿದೆ.
Next Story





