ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಆನ್‌ಲೈನ್ ಟ್ಯಾಕ್ಸಿ ಚಾಲಕರಿಂದ ಮುಷ್ಕರ
ಮಂಗಳೂರು, ಫೆ.8: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಡ್ರೈವರ್ಸ್ ಆ್ಯಂಡ್ ಓನರ್ಸ್ ಅಸೋಸಿಯೇಶನ್ ಮುಷ್ಕರ ಆರಂಭಿಸಿದೆ. ಅಲ್ಲದೆ ಬೇಡಿಕೆಗಳ ಈಡೇರಿಕೆಗೆ 2 ದಿನಗಳ ಗಡುವು ವಿಸಿದೆ.
ಉಬರ್ ಸಂಸ್ಥೆಯವರ ಸದ್ರಿ ದರ ನಿಗದಿಯಿಂದ ಟ್ಯಾಕ್ಸಿ ಅಪರೇಟರ್‌ಗಳಿಗೆ ಭಾರೀ ನಷ್ಟವಾಗುತ್ತಿದೆ. ಈಗ ನೀಡುತ್ತಿರುವ ದರಗಳಿಂದ ಕಾರು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ದೂರದಿಂದ ಟ್ರಿಪ್ ಬರುತ್ತಿದ್ದು, ಇದರಿಂದ ನಷ್ಟ ಅನುಭವಿಸುತ್ತಿದ್ದೇವೆ ಎಂದು ಅಸೋಸಿಯೇಶನ್‌ನ ಪದಾಕಾರಿಗಳು ಉಬರ್‌ನ ವ್ಯವಸ್ಥಾಪಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಸದ್ಯದ ರೇಟ್‌ಪ್ಲಾನನ್ನು ಬದಲಾಯಿಸಿ ಹಿಂದಿನ ಪ್ರೋತ್ಸಾಹಧನವನ್ನು ಮುಂದುವರಿಸಬೇಕು. ದೂರದ ಸ್ಥಳಗಳಿಂದ ಬರುವ ಟ್ರಿಪ್‌ನ್ನು 3 ಕಿ.ಮೀ. ಒಳಗೆ ಸೀಮಿತಗೊಳಿಸಬೇಕು. ಸುರತ್ಕಲ್, ಪಣಂಬೂರು, ತಣ್ಣೀರುಬಾವಿ ಸ್ಥಳಗಳಿಗೆ ಸೇವೆಯನ್ನು ಮುಂದುವರಿಸಬೇಕು. ಏರ್‌ಪೋರ್ಟ್ ಡ್ರಾಪ್‌ಗೆ ಕನಿಷ್ಠ ದರವನ್ನು ಮುಂದುವರಿಸಬೇಕೆಂಬ ಬೇಡಿಕೆಗಳ ಈಡೇರಿಕೆಗೆ ಅಸೋಸಿಯೇಶನ್ ಒತ್ತಾಯಿಸಿದೆ.





