ಭಾರತ್ ಬೀಡಿ ವರ್ಕ್ಸ್ ಲಿಮಿಟೆಡ್‌ನ 104ನೆ ಸ್ಥಾಪಕರ ದಿನಾಚರಣೆ

ಮಂಗಳೂರು, ಫೆ.8: ನಗರದ ಕದ್ರಿ ರಸ್ತೆಯಲ್ಲಿರುವ ಭಾರತ್ ಬೀಡಿ ವರ್ಕ್ಸ್ (ಪ್ರೆ) ಲಿಮಿಟೆಡ್‌ನ 104ನೆ ಸ್ಥಾಪಕರ ದಿನಾಚರಣೆಯನ್ನು ಬುಧವಾರ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
1930ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ಬಿ.ಮಂಜುನಾಥ ಪೈಯವರು ಸಣ್ಣಮಟ್ಟದಲ್ಲಿ ಸ್ಥಾಪಿಸಿದ ಈ ಸಂಸ್ಥೆಯು ಕ್ರಮೇಣ ಹೆಮ್ಮರವಾಗಿ ಬೆಳೆದು ತನ್ನ ಮೂವತ್ತು ಮಾರ್ಕಿನ ಬೀಡಿಗಳ ಮೂಲಕ ದೇಶವಿದೇಶಗಳಲ್ಲಿ ಹೆಸರುವಾಸಿಯಾಯಿತು. ಈಗ ಸಂಸ್ಥೆಯು ಇತರ ಹಲವು ಉದ್ದಿಮೆಗಳನ್ನು ಹಮ್ಮಿಕೊಂಡು ಭಾರತ್ ಸಮೂಹ ಸಂಸ್ಥೆಯಾಗಿ ಮಾರುಕಟ್ಟೆಯಲ್ಲಿ ರೂಪುಗೊಂಡಿದೆ.
ಸ್ಥಾಪಕ ಮಂಜುನಾಥ ಪೈಯವರು 1982ರವರೆಗೆ ಭಾರತ್ ಬೀಡಿ ವರ್ಕ್ಸ್ (ಪ್ರೆ) ಲಿಮಿಟೆಡ್ ಉಸ್ತುವಾರಿ ವಹಿಸಿದ್ದು, ನಂತರ ಬಿ.ಗಣಪತಿ ಪೈಯವರು 2012ರವರೆಗೆ ಸಂಸ್ಥೆಯ ಆಡಳಿತ ನಿರ್ವಹಿಸಿದರು.
ಸ್ಥಾಪಕರ ದಿನಾಚರಣೆಯ ಸಮಾರಂಭದಲ್ಲಿ ಭಾರತ್ ಬೀಡಿ ವರ್ಕ್ಸ್ (ಪ್ರೆ) ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಜಿ.ಪೈ ಮಾತನಾಡಿ, ಸಂಸ್ಥೆಯು ಹೆಮ್ಮರವಾಗಿ ಬೆಳೆಯಲು ಸ್ಥಾಪಕ ಮಂಜುನಾಥ ಪೈ ಮತ್ತು ಅಂದಿನ ಚೇರ್‌ಮನ್ ಮತ್ತು ಆಡಳಿತ ನಿರ್ದೇಶಕರಾಗಿದ್ದ ಬಿ. ಗಣಪತಿಯವರ ಸೂಕ್ತ ಮಾರ್ಗ ದರ್ಶನವೇ ಕಾರಣ ಎಂದು ಹೇಳಿದರು.
ಕಾರ್ಯನಿರ್ವಾಹಕ ನಿರ್ದೇಶಕ ಸುೀರ್ ಎಂ. ಪೈ ವಂದಿಸಿದರು. ಸಿಂಡಿಕೇಟ್ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಸೀತಾರಾಮ್ ಸೋಮಯಾಜಿ ಮತ್ತು ಕಾರ್ಪೊರೇಶನ್ ಬ್ಯಾಂಕ್‌ನ ಉಪ ಮಹಾಪ್ರಬಂಧಕ ವಿಠಲ್ ಶೆಣೈಯವರು ಮಾತನಾಡಿ ಸಂಸ್ಥೆಯ ಸಾಧನೆಯನ್ನು ಶ್ಲಾಸಿ ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಂದ್ರ ಡಿ. ಪೈ, ಸುಬ್ರಾಯ ಎಂ. ಪೈ, ಆನಂದ್ ಜಿ. ಪೈ, ವೆಂಕಟೇಶ್ ಎಂ. ಪೈ, ಬ್ಯಾಂಕ್‌ನ ಅಕಾರಿಗಳು, ಸಂಸ್ಥೆಯ ಅಕಾರಿಗಳು ಮತ್ತು ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು.







