ಕುಂಬ್ಳೆಯ 10 ವಿಕೆಟ್ ವಿಶ್ವ ದಾಖಲೆ ತಪ್ಪಿಸಲು ವಕಾರ್ ಅಡ್ಡ ದಾರಿ ಹಿಡಿದಿದ್ದರೆ ?
ಪಾಕ್‌ನ ಮಾಜಿ ವೇಗಿಯಿಂದ ಸ್ಫೋಟಕ ಮಾಹಿತಿ

ಹೊಸದಿಲ್ಲಿ, ಫೆ.8: ಭಾರತದ ಸ್ಪಿನ್ನರ್ ಅನಿಲ್ ಕುಂಬ್ಳೆ 74 ರನ್‌ಗೆ ಪಾಕಿಸ್ತಾನದ ಹತ್ತು ವಿಕೆಟ್ ಉರುಳಿಸಿದ ದಾಖಲೆಗೆ ಫೆ.7ಕ್ಕೆ ಹದಿನೆಂಟು ವರ್ಷ ಸಂದಿವೆ. ಕುಂಬ್ಳೆ 1999, ಫೆ.7ರಂದು ಕುಂಬ್ಳೆ ಅಪೂರ್ವ ದಾಖಲೆ ನಿರ್ಮಿಸಿದ್ದರು.
ವಿಶ್ವದ ಇತರ ಯಾವನೇ ಒಬ್ಬ ಬೌಲರಿಗೂ ಕುಂಬ್ಳೆ ಸಾಧನೆಯನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ. ಆದರೆ ಪಾಕಿಸ್ತಾನದ ವೇಗಿ ವಕಾರ್ ಯೂನಿಸ್ ಅವರು ಕುಂಬ್ಳೆಗೆ ಇಂತಹ ಅಪೂರ್ವ ದಾಖಲೆಯನ್ನು ತಪ್ಪಿಸಲು ಯತ್ನ ನಡೆಸಿದ್ದರು. ವಕಾರ್ ಉದ್ದೇಶಪೂರ್ವಕವಾಗಿ ರನೌಟಾಗಲು ಶ್ರಮಿಸಿದ್ದರು. ಆದರೆ ಕುಂಬ್ಳೆ ಇದಕ್ಕೆ ಅವಕಾಶ ನೀಡಲಿಲ್ಲ ಎಂದು ಆಗ ಪಾಕ್ ತಂಡದ ನಾಯಕರಾಗಿದ್ದ ವಸೀಂ ಅಕ್ರಂ ನೆನಪಿಸಿಕೊಂಡಿದ್ಧಾರೆ.
ಅಂತಿಮ ವಿಕೆಟ್‌ಗೆ ಅಕ್ರಂಗೆ ಜೊತೆಯಾಗಿದ್ದ ವಕಾರ್ ಯೂನಿಸ್ ಕುಂಬ್ಳೆಗೆ ಹತ್ತು ವಿಕೆಟ್‌ಗಳ ದಾಖಲೆಯ ಯತ್ನಕ್ಕೆ ಅಡ್ಡಿಯನ್ನುಂಟು ಮಾಡಲು ಯತ್ನಿಸಿದರೆನ್ನಲಾಗಿದೆ. ಆದರೆ ಅಕ್ರಮ್ ಅವರು ಕುಂಬ್ಳೆಯ ಎಸೆತವನ್ನು ಎದುರಿಸುವಂತೆ ಮತ್ತು ಅನಗತ್ಯವಾಗಿ ವಿಕೆಟ್ ಕೈ ಚೆಲ್ಲದಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.
ಅಕ್ರಮ್ ಅವರು ವಕಾರ‍್ ಗೆ ಟ್ವೀಟ್ ಮಾಡುವ ಮೂಲಕ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಆದರೆ ವಕಾರ‍್ ನಿರಾಕರಿಸಿದ್ದಾರೆ. ಆದರೆ ವೀರೇಂದ್ರ ಸೆಹ್ವಾಗ್ ಅವರು "ಕುಂಬ್ಳೆಗೆ 74ಕ್ಕೆ 10 ವಿಕೆಟ್ ಪಡೆಯಲು ಸಹಕರಿಸಿದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಅಕ್ರಮ್‌ಗೆ ಟ್ವೀಟ್ ಮಾಡಿದ್ಧಾರೆ.





