ಮೊದಲ ಓವರ್ ನಲ್ಲಿ ರಾಹುಲ್ ಔಟ್

ಹೈದರಾಬಾದ್, ಫೆ.9: ಇಲ್ಲಿ ಆರಂಭಗೊಂಡ ಬಾಂಗ್ಲಾ ವಿರುದ್ದದ ಏಕೈಕ ಟೆಸ್ಟ್ ನ ನಾಲ್ಕನೆ ಎಸೆತದಲ್ಲಿ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಔಟಾಗಿದ್ದಾರೆ.
ಟಾಸ್ ಜಯಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಮುರಳಿ ವಿಜಯ್ ಜೊತೆ ಇನಿಂಗ್ಸ್ ಆರಂಭಿಸಿದ ಲೋಕೇಶ್ ರಾಹುಲ್ ಅವರು ಬಾಂಗ್ಲಾದ ವೇಗಿ ತಾಸ್ಕಿನ್ ಅಹ್ಮದ್ ಅವರ ಓವರ್ ನ ಮೊದಲ ಎಸೆತದಲ್ಲಿ 2 ರನ್ ಮಾಡಿದ್ದರು. ಆದರೆ 4ನೆ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಬ್ಯಾಟಿಂಗ್ ಮುಂದುವರಿಸಿದ್ದಾರೆ.
Next Story





