ಜಯಾ ನಿವಾಸವನ್ನು ಸ್ಮಾರಕ ಭವನವನ್ನಾಗಿಸಲು ಉಸ್ತುವಾರಿ ಸಿಎಂ ಪನ್ನೀರ್ ಸೆಲ್ವಂ ಆದೇಶ

ಚೆನ್ನೈ, ಫೆ.9: ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ದಿವಂಗತ ಜಯಲಲಿತಾ ಅವರ ಮನೆ ಪೋಯಸ್ ಗಾರ್ಡನ್ ನ್ನು ಸ್ಮಾರಕ ಭವನವನ್ನಾಗಿ ಮಾಡುವಂತೆ ಉಸ್ತುವಾರಿ ಸಿಎಂ ಪನ್ನೀರ್ ಸೆಲ್ವಂ ಇಂದು ಆದೇಶ ನೀಡಿದ್ಧಾರೆ.
ತಮ್ಮ ನಿವಾಸದಲ್ಲಿ ಇಂದು ಕರೆದಿದ್ದ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳ ಸಭೆಯಲ್ಲಿ ಜಯಲಲಿತಾ ಅವರ ಮನೆಯನ್ನು ಸ್ಮಾರಕ ಭವನವನ್ನಾಗಿಸಲು ಸಾರ್ವಜನಿಕರಿಂದ ಬಂದಿರುವ ಪತ್ರಗಳ ಆಧಾರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆದೇಶ ನೀಡಿದರು.
ಇದೇ ವೇಳೆ ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ರಚನೆಗೆ ಅಗತ್ಯದ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಿಎಂ ಸೆಲ್ವಂ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು. ತಮಿಳುನಾಡಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಸಿಎಂ ಚರ್ಚಿಸಿದರು.
ಡಿಜಿ-ಐಜಿಪಿ ಮತ್ತಿತರ ಆಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Next Story





