ತೋಚಿದಲ್ಲಿಗೆ ಅಟ್ಟಲು ನಾವು ಕುರಿ ಮಂದೆಯಲ್ಲ: ಕಮಲಹಾಸನ್

ಚೆನ್ನೈ,ಫೆ. 9: ತಮಿಳ್ನಾಡಿನ ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂರನ್ನು ಖ್ಯಾತ ಸಿನೆಮಾ ನಟ ಕಮಲಹಾಸನ್ ಬೆಂಬಲಿಸಿದ್ದಾರೆ. ಪನ್ನೀರ್‌ಸೆಲ್ವಂರನ್ನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಡಬೇಕೆಂದು ಕಮಲ್ ಆಗ್ರಹಿಸಿದರು. ಅವರು ತನ್ನ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಮತ್ತೆ ಯಾಕೆ ಅವರನ್ನು ಇನ್ನಷ್ಟು ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಸಬಾರದು ಎಂದು ಕಮಲ್ ಶಶಿಕಲಾರನ್ನು ಪ್ರಶ್ನಿಸಿದ್ದಾರೆ. ಜನರಿಗೆ ಇಷ್ಟವಿಲ್ಲದಿದ್ದರೆ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸುವ ಆಧಿಕಾರ ಜನರಿಗಿದೆಯಲ್ಲವೇ? ಎಂದು ಕಮಲ್‌ಹಾಸನ್ ಅಭಿಪ್ರಾಯಿಸಿದರು.
ತಮಿಳುನಾಡಿನ ಈಗಿನ ಅವಸ್ಥೆ ಕೆಟ್ಟ ಕ್ಲೈಮಾಕ್ಸ್ ಎಂದ ಕಮಲ್, ಶಶಿಕಲಾರ ಹಸ್ತಕ್ಷೇಪ ತನಗೆ ನೋವು ತಂದಿದೆ ಎಂದಿದ್ದಾರೆ. ನಾವು ಕುರಿಮಂದೆಯಲ್ಲ ನಮ್ಮನ್ನು ಬೇಕಾದಲ್ಲಿಗೆ ಅಟ್ಟಲ್ಪಡುವುದು ನಮಗೆ ಇಷ್ಟವಿಲ್ಲ. ಜೊತೆಗೆ ಎಐಡಿಎಂಕೆಯನ್ನು ಅವರು ಟೀಕಿಸಿದ್ದಾರೆ. ಹೆಚ್ಚು ಕಾಲ ತಮಿಳರು ಇದನ್ನೆಲ್ಲ ಸಹಿಸಲಾರರು ಎಂದು ಕಮಲ್‌ಹಾಸನ್ ಎಚ್ಚರಿಸಿದ್ದಾರೆಂದು ವರದಿ ತಿಳಿಸಿದೆ.
Next Story





