Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮೂಡುಬಿದಿರೆ ರೇಂಜ್ ವಿದ್ಯಾರ್ಥಿ ಫೆಸ್ಟ್...

ಮೂಡುಬಿದಿರೆ ರೇಂಜ್ ವಿದ್ಯಾರ್ಥಿ ಫೆಸ್ಟ್ : ತೋಡಾರು ಮದರಸ ಚಾಂಪಿಯನ್

ವಾರ್ತಾಭಾರತಿವಾರ್ತಾಭಾರತಿ9 Feb 2017 2:39 PM IST
share
ಮೂಡುಬಿದಿರೆ ರೇಂಜ್ ವಿದ್ಯಾರ್ಥಿ ಫೆಸ್ಟ್ : ತೋಡಾರು ಮದರಸ ಚಾಂಪಿಯನ್

ಮೂಡುಬಿದಿರೆ, ಫೆ.9: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ಅಧೀನದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿರುವ ಮದರಸ ವಿದ್ಯಾರ್ಥಿಗಳ ಕಲಾ ಸ್ಪರ್ಧೆ ವಿದ್ಯಾರ್ಥಿ ಫೆಸ್ಟ್ - 2017 ಇದರ ಮೂಡುಬಿದಿರೆ ರೇಂಜ್ ಮಟ್ಟದ ಕಾರ್ಯಕ್ರಮದ ಸಮಾರೋಪ ಸಮಾರಂಭವು ಇಲ್ಲಿನ ಸಮಾಜ ಮಂದಿರದಲ್ಲಿ ನಡೆಯಿತು.

ಅತ್ರಾಡಿ ಖಾಝಿ ಶೈಖುನಾ ಅಲ್ - ಹಾಜ್ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ದುಆ ನೆರವೇರಿಸಿದರು. ಮೂಡುಬಿದಿರೆ ರೇಂಜ್ ಮದರಸ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಅಬ್ದುರ್ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. 25 ಮದರಸಗಳಿಂದ 335 ವಿದ್ಯಾರ್ಥಿಗಳು ಸೂಪರ್ ಸೀನಿಯರ್, ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗಗಳಲ್ಲಿ ಕ್ರಮವಾಗಿ ನಾಟಿಗ ಉಸ್ತಾದ್ ವೇದಿಕೆ, ಕೋಟುಮಲ ಬಾಪು ಮುಸ್ಲಿಯಾರ್ ವೇದಿಕೆ, ಸಿ.ಎಂ. ಉಸ್ತಾದ್ ವೇದಿಕೆ ಮತ್ತು ಕೋಟ ಉಸ್ತಾದ್ ವೇದಿಕೆಗಳಲ್ಲಿ ಖಿರಾಅತ್, ಹಿಫ್‌ಳ್, ಹಾಡು, ಸಮೂಹ ಹಾಡು, ಕನ್ನಡ, ಮಲಯಾಳಂ, ಅರಬಿ ಭಾಷಣೆ, ಕಥಾ ಪ್ರಸಂಗ, ಬುರ್ದಾ ಆಲಾಪಣೆ, ಆಝಾನ್, ಚಿತ್ರಕಲೆ, ಪ್ರಬಂಧ ಮತ್ತು ಕ್ವಿರ್ ಸ್ಪರ್ಧೆಗಳನ್ನು ನಡೆಸಲಾಯಿತು.

ಸೀನಿಯರ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್, ಜೂನಿಯರ್ ವಿಭಾಗದಲ್ಲಿ ರನ್ನರ್ಸ್‌ ಪ್ರಶಸ್ತಿ ಪಡೆದ ತೋಡಾರಿನ ದಾರುಸ್ಸಲಾಂ ಮದರಸವು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆಯಿತು. ಮೂಡುಬಿದಿರೆಯ ಮುಹಮ್ಮದೀಯ ಮದರಸ ಎರಡನೆ ಗರಿಷ್ಠ ಅಂಕ ಪಡೆದು ರನ್ನರ್ಸ್‌ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಜೂನಿಯರ್ ವಿಭಾಗದ ಚಾಂಪಿಯನ್‌ಶಿಪ್ ಕೋಟೆಬಾಗಿಲಿನ ಕುವ್ವತುಲ್ ಇಸ್ಲಾಂ ಮದರಸದ ಪಾಲಾದರೆ ಸೀನಿಯರ್ ವಿಭಾಗದ ರನ್ನರ್ಸ್‌ ನೂರುಲ್ ಹುದಾ ಮದರಸ ವಾಲ್ಪಾಡಿ ಪಡೆದುಕೊಂಡಿತು.  ಸಬ್‌ಜೂನಿಯರ್ ವಿಭಾಗದ ರನ್ನರ್ಸ್‌ ಹಿದಾಯತುಲ್ ಇಸ್ಲಾಂ ಲಾಡಿ ಮದರಸದ ವಿದ್ಯಾರ್ಥಿಗಳು ಪಡೆದುಕೊಂಡರು. ಈ ಸಂದರ್ಭದಲ್ಲಿ ಮೂಡುಬಿದಿರೆಯ ಕರ್ನಾಟಕ ಸರಕಾರದಿಂದ ಜೀವರಕ್ಷಕ ಪ್ರಶಸ್ತಿ ಪುರಸ್ಕೃತ ಸಿ.ಎಚ್. ಅಬ್ದುಲ್ ಗಫೂರ್ ಅವರನ್ನು ಮದರಸ ಮ್ಯಾನೇಜ್‌ಮೆಂಟ್ ವತಿಯಿಂದ ಸನ್ಮಾನಿಸಲಾಯಿತು. ಹಾಜಿ ಎಂ.ಎಚ್. ಮುಹಮ್ಮದ್ ಶರೀಫ್ ಸನ್ಮಾನಿತರ ಪರಿಚಯ ಮಾಡಿದರು. ಮೂಡುಬಿದಿರೆಯ ಮಕ್ಕಳ ತಜ್ಞರಾದ ಡಾ ಮುರಳೀಕೃಷ್ಣರವರು ಎಂ.ಆರ್. ಲಸಿಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಕಾಶನದ ಅಲ್-ಮಿಸ್ಬಾಹ್ ಪುಸ್ತಕವನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಎಂ.ಹೆಚ್. ಇಕ್ಬಾಲ್ ಬಿಡುಗಡೆಗೊಳಿಸಿದರು. ಉಪಾಧ್ಯಕ್ಷ ಅಬ್ದುಲ್ಲಾ ಕೋಟೆಬಾಗಿಲು ಸ್ವೀಕರಿಸಿದರು. ಕಳೆದ ಬಾರಿ 7ನೆ ತರಗತಿಯಲ್ಲಿ ರೇಂಜ್‌ನಲ್ಲಿ ಪ್ರಥಮ ಸ್ಥಾನಗಳಿಸಿದ ನೂರುಲ್ ಇಸ್ಲಾಂ ಮದರಸ ಈದ್ಗಾದ ವಿದ್ಯಾರ್ಥಿನಿ ರಿಫಾ ಝೈನಬಾರಿಗೆ ನಗದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮೂಡುಬಿದಿರೆ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಮುಸ್ತಫಾ ಯಮಾನಿ ಬಹುಮಾನ ವಿತರಿಸಿದರು.

ಗುರುಪುರ ರೇಂಜ್ ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ನೌಶಾದ್ ಸುರಲ್ಪಾಡಿ, ಕಾರ್ಯದರ್ಶಿ ಎನ್.ಜಿ. ಶಾಹುಲ್ ಹಮೀದ್, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ರಫೀಕ್ ದಾರಿಮಿ, ಎಸ್‌ಕೆಎಸ್‌ಎಸ್‌ಎಫ್ ವಲಯಾಧ್ಯಕ್ಷ ಅಬ್ದುಲ್ ಅಝೀರ್ ಮಾಲಿಕ್, ರೇಂಜ್ ಮದರಸ ಮ್ಯಾನೇಜ್‌ಮೆಂಟ್ ಉಪಾಧ್ಯಕ್ಷ ಎಚ್.ಎ. ರಹ್ಮಾನ್, ಕೋಶಾಧಿಕಾರಿ ಅಶ್ರಫ್ ಮರೋಡಿ, ಸ್ವಾಗತ ಸಮಿತಿಯ ಕೋಶಾಧಿಕಾರಿ ನಝೀರ್ ಅಹ್ಮದ್ ಅಂಗರಕರ್ಯ, ಹಾಜಿ ಮುಹಮ್ಮದ್ ಬಾನಿಲು ಗಂಟಾಲ್ಕಟ್ಟೆ, ಅಬ್ದುಲ್ ಹಮೀದ್ ವಾಲ್ಪಾಡಿ, ಮೋನಾಕ ವಾಲ್ಪಾಡಿ, ಅಬ್ದುಲ್ ಗಫೂರ್ ಕೋಟೆಬಾಗಿಲು, ಅಬ್ದುಲ್ಲಾ ಪುತ್ತಿಗೆ, ಯೂಸೂಫ್ ಮಿಜಾರ್, ಯಾಕೂಬ್ ಪೆರಿಂಜೆ, ಅಬ್ದುರ್ರಝಾಕ್ ಹೊಸಂಗಡಿ, ಅಬ್ದುರ್ರಝಾಕ್ ಎಸ್.ಕೆ. ಪಡ್ಡಂದಡ್ಕ, ಇಬ್ರಾಹೀಂ ದಾರಿಮಿ ಕಾಶಿಪಟ್ನ, ಅಬ್ದುಲ್ಲಾ ಹಾಮಿದಿ ಹಂಡೇಲು, ಅಬೂಬಕ್ಕರ್ ಸಿದ್ದೀಕ್ ದಾರಿಮಿ ಪಡ್ಡಂದಡ್ಕ, ಬಶೀರ್ ಯಮಾನಿ ಜ್ಯೋತಿನಗರ, ಬಶೀರ್ ದಾರಿಮಿ ಹೊಸಂಗಡಿ, ಹನೀಫ್ ದಾರಿಮಿ ಸಚ್ಚೇರಿಪೇಟೆ, ರಫೀಕ್ ಫೈಝಿ ಗುಂಡುಕಲ್ಲು, ಮುಸ್ತಫಾ ಹನೀಫಿ ಗಂಟಾಲ್ಕಟ್ಟೆ, ಖಲೀಲ್ ದಾರಿಮಿ ಹೊಕ್ಕಾಡಿಗೋಳಿ ಮತ್ತಿತರರು ಉಪಸ್ಥಿತರಿದ್ದರು. ಅಬ್ದುಸ್ಸಲಾಂ ಯಮಾನಿ ಸ್ವಾಗತಿಸಿದರು. ಸಿದ್ದೀಕ್ ಮುಸ್ಲಿಯಾರ್ ಮೂಡುಬಿದಿರೆ, ಕರೀಂ ಮುಸ್ಲಿಯಾರ್ ತೋಡಾರ್ ನಿರೂಪಿಸಿದರು. ಶಬೀರ್ ಅಹ್ಮದ್ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X