7ನೆ ಮಹಡಿಯಿಂದ ಹಾರಿದ ಪತ್ನಿಯ ಜಡೆಹಿಡಿದು ಜೀವ ಉಳಿಸಿದ ಪತಿ

ಶಾನಕ್ಸಿ,ಫೆ. 9: ಪತಿ ಪತ್ನಿಯರ ನಡುವೆ ಜಗಳ ಆಗುವುದರಲ್ಲಿ ವಿಶೇಷವಿಲ್ಲ.ಆದರೆ ಚೀನಾದ ಶಾನಕ್ಸಿ ಎಂಬಲ್ಲಿ ಪತಿಯಿಂದ ಕೋಪಗೊಂಡ ಮೂವತ್ತುವರ್ಷದ ಮಹಿಳೆ ಏಳನೆ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಕೆಳಗೆ ಹಾರಿದ್ದಾಳೆ. ಕೂಡಲೇ ಪತಿ ಆಕೆಯ ಜಡೆ ಹಿಡಿದು ರಕ್ಷಿಸಿದ್ದಾನೆ. ಪೊಲೀಸರು ಅಲ್ಲಿಗೆ ತಲುಪುವವರೆಗೂ ಕೆಳಗೆ ಹಾರಿದ್ದ ಪತ್ನಿಯನ್ನು ತಲೆಕೂದಲಿನ ಸಹಾಯದಿಂದ ಕೆಳಗೆ ಬೀಳದಂತೆ ತಡೆದು ನಿಲ್ಲಿಸಿದ್ದ. ಸುಮಾರು ಮೂರು ನಿಮಿಷಗಳ ಕಾಲ ಹಾಗೆ ಹಿಡಿದುನಿಲ್ಲಿಸಿದ್ದರಿಂದ ಮಹಿಳೆಯನ್ನುಸುರಕ್ಷಿತವಾಗಿ ಮೇಲೆತ್ತಲಾಯಿತು.
ಈಘಟನೆ ಒಬ್ಬಪೊಲೀಸನ ಬಳಿಯಿದ್ದ ಕ್ಯಾಮರಾದಲ್ಲಿ ದಾಖಲಾಗಿತ್ತು. ಅದರಲ್ಲಿ ಪತಿ ತಲೆಯ ಜುಟ್ಟು ಹಿಡಿದು ಪತ್ನಿಯನ್ನು ಹಿಡಿದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದುವೇಳೆ ನಾವು ತಲುಪಲು ಸ್ವಲ್ಪ ತಡವಾಗಿದ್ದರೂ ಪತಿಯ ಕೈಯಿಂದ ಜಾರಿ ಪತ್ನಿ ಕೆಳಗೆ ಬೀಳುತ್ತಿದ್ದಳು. ಮತ್ತು ಅವಳನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
Next Story







