Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ವಿರಾಟ -ವಿಜಯ ಚೇತೋಹಾರಿ ಬ್ಯಾಟಿಂಗ್

ವಿರಾಟ -ವಿಜಯ ಚೇತೋಹಾರಿ ಬ್ಯಾಟಿಂಗ್

ಏಕೈಕ ಟೆಸ್ಟ್: ಬಾಂಗ್ಲಾ ವಿರುದ್ಧ ಭಾರತ 356/3;*ಕೊಹ್ಲಿ, ಮುರಳಿ ಶತಕ* ಶತಕ ವಂಚಿತ ಚೇತೇಶ್ವರ ಪೂಜಾರ

ವಾರ್ತಾಭಾರತಿವಾರ್ತಾಭಾರತಿ9 Feb 2017 5:01 PM IST
share
ವಿರಾಟ -ವಿಜಯ ಚೇತೋಹಾರಿ ಬ್ಯಾಟಿಂಗ್

ಹೈದರಾಬಾದ್, ಫೆ.9: ಬಾಂಗ್ಲಾ ವಿರುದ್ಧದ ಏಕೈಕ ಟೆಸ್ಟ್‌ನ ಮೊದಲ ದಿನ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ದಾಂಡಿಗ ಮುರಳಿ ವಿಜಯ್ ಶತಕ ದಾಖಲಿಸಿದ್ಧಾರೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಟೆಸ್ಟ್‌ನ ಮೊದಲ ದಿನದಾಟದಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 326 ರನ್ ಗಳಿಸಿದೆ.
ಆಟ ನಿಂತಾಗ ನಾಯಕ ವಿರಾಟ್ ಕೊಹ್ಲಿ 111 ರನ್ ಮತ್ತು ಅಜಿಂಕ್ಯ ರಹಾನೆ ಔಟಾಗದೆ 45 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೆರವಿನಲ್ಲಿ ಭಾರತವು ಬಾಂಗ್ಲಾದ ವಿರುದ್ಧ ಮೊದಲ ದಿನ ಮೇಲುಗೈ ಸಾಧಿಸಿದೆ.
ಭಾರತದ ಆರಂಭ ಚೆನ್ನಾಗಿರಲಿಲ್ಲ. ಮುರಳಿ ವಿಜಯ್ ಜೊತೆ ಇನಿಂಗ್ಸ್ ಆರಂಭಿಸಿದ ಯುವ ದಾಂಡಿಗ ಲೋಕೇಶ್ ರಾಹುಲ್ ಅವರು ಮೊದಲ ಓವರ್‌ನಲ್ಲಿ ತಾಸ್ಕಿನ್ ಅಹ್ಮದ್ ಅವರ ಮೊದಲ ಎಸೆತದಲ್ಲಿ 2 ರನ್ ಗಳಿಸುವ ಮೂಲಕ ತನ್ನ ಮತ್ತು ತಂಡದ ಖಾತೆ ತೆರೆದರು. ಆದರೆ ಓವರ್‌ನ ಎರಡನೆ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರುವುದರೊಂದಿಗೆ ನಿರಾಶೆಗೊಂಡರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 1 ರನ್‌ನಿಂದ ದ್ವಿಶತಕ ವಂಚಿತಗೊಂಡಿದ್ದ ರಾಹುಲ್ ಅವರು ಬೇಗನೆ ಪೆವಿಲಿಯನ್ ಸೇರಿದರು. ರಾಹುಲ್ ವಿಕೆಟ್ ಪಡೆದ ಬಾಂಗ್ಲಾದ ಆಟಗಾರರ ಯಶಸ್ಸಿನ ನಗು ಬಹಳ ಹೊತ್ತಿನ ತನಕ ಇರಲಿಲ್ಲ.
178 ರನ್‌ಗಳ ಜೊತೆಯಾಟ: ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ಎರಡನೆ ವಿಕೆಟ್‌ಗೆ 178 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.
ಮುರಳಿ ವಿಜಯ್ ಅವರನ್ನು ರನೌಟ್ ಮಾಡುವ ಅವಕಾಶ ಸಿಕ್ಕಿದ್ದರೂ, ಬಾಂಗ್ಲಾದ ಆಟಗಾರರಿಗೆ ಸಾಧ್ಯವಾಗಲಿಲ್ಲ.
ಚೇತೇಶ್ವರ ಪೂಜಾರ ಶತಕ ದಾಖಲಿಸುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಸಾಧ್ಯವಾಗಲಿಲ್ಲ. ಮುರಳಿ ವಿಜಯ್ 82 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ ಅರ್ಧಶತಕ ಗಳಿಸಿದರು. ಚೇತೇಶ್ವರ ಪೂಜಾರ 108 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು.
ಪೂಜಾರ ಮತ್ತು ವಿಜಯ್ ಶತಕದ ಹಾದಿಯಲ್ಲಿ ಇದ್ದರು. 50.5ನೆ ಓವರ್‌ನಲ್ಲಿ ಮೆಹೆದಿ ಹಸನ್ ಮಿರಾಝ್ ಅವರ ಎಸೆತವನ್ನು ಎದುರಿಸುವಲ್ಲಿ ಎಡವಿದ ಪೂಜಾರ ವಿಕೆಟ್ ಕೀಪರ್ ಮುಶ್ಫೀಕುರ್ರಹೀಮ್‌ಗೆ ಕ್ಯಾಚ್ ನೀಡಿದರು.
177 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ ಪೂಜಾರ 83 ರನ್ ಗಳಿಸಿ ಪೆವಿಲಿಯನ್‌ಗೆ ನಿರ್ಗಮಿಸಿದರು.
29ರ ಹರೆಯದ ಹೈದರಾಬಾದ್‌ನ ಅಗ್ರ ಸರದಿಯ ದಾಂಡಿಗ ಪೂಜಾರ ಅವರು 44ನೆ ಟೆಸ್ಟ್‌ನಲ್ಲಿ 11ನೆ ಶತಕ ದಾಖಲಿಸುವ ಅವಕಾಶ ಕಳೆದುಕೊಂಡರು.
ಮುರಳಿ ವಿಜಯ್ 9ನೆ ಶತಕ: ಪೂಜಾರ ನಿರ್ಗಮನದ ಬಳಿಕ ನಾಯಕ ವಿರಾಟ್ ಕೊಹ್ಲಿ ಅವರು ಮುರಳಿ ವಿಜಯ್‌ಗೆ ಜೊತೆಯಾದರು. ಇವರು 54 ರನ್‌ಗಳ ಜೊತೆಯಾಟ ನೀಡಿದರು.
ಮುರಳಿ ವಿಜಯ್ ಶತಕ ತಲುಪುವಾಗ ಕೊಹ್ಲಿ ಔಟಾಗದೆ 11 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಮುರಳಿ ವಿಜಯ್ ಅವರು 60.3ನೆ ಓವರ್‌ನಲ್ಲಿ ಕಮ್ರುಲ್ ಇಸ್ಲಾಂ ರಬ್ಬಿ ಎಸೆತದಲ್ಲಿ 2 ರನ್ ಗಳಿಸುವ ಮೂಲಕ ಅವರು 48ನೆ ಟೆಸ್ಟ್‌ನಲ್ಲಿ 9ನೆ ಶತಕ ಪೂರ್ಣಗೊಳಿಸಿದರು.
149 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ವಿಜಯ್ ಶತಕ ಪೂರ್ಣಗೊಳಿಸಿದರು. 63.4ನೆ ಓವರ್‌ನಲ್ಲಿ ಮುರಳಿ ವಿಜಯ್ ತೈಜುಲ್ ಇಸ್ಲಾಂ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್‌ಗೆ ವಾಪಸಾದರು. ವಿಜಯ್ 108 ರನ್ (160ಎ, 12ಬೌ,1ಸಿ) ಗಳಿಸಿದರು.
ಕೊಹ್ಲಿ -ರಹಾನೆ ಮುರಿಯದ ಆಟ: ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನಾಲ್ಕನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 122 ರನ್‌ಗಳ ಜೊತೆಯಾಟ ನೀಡಿ ಬ್ಯಾಟಿಂಗ್‌ನ್ನು ಎರಡನೆ ದಿನಕ್ಕೆ ಕಾಯ್ದಿರಿಸಿದ್ದಾರೆ.
ವಿರಾಟ್ ಕೊಹ್ಲಿ 54ನೆ ಪಂದ್ಯದಲ್ಲಿ 16ನೆ ಶತಕ ಪೂರ್ಣಗೊಳಿಸಿದ್ದಾರೆ. 130 ಎಸೆತಗಳನ್ನು ಎದುರಿಸಿ ಕೊಹ್ಲಿ 10 ಬೌಂಡರಿಗಳ ಸಹಾಯದಿಂದ ಶತಕ ತಲುಪಿದರು.
ಇವರಿಗೆ ರಹಾನೆ ಸಾಥ್ ನೀಡಿ ಔಟಾಗದೆ 45 (60ಎ, 7ಬೌ) ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 111 ರನ್ (141ಎ, 12ಬೌ) ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
 ಬಾಂಗ್ಲಾ ತಂಡದ ಪರ ತಾಸ್ಕಿನ್ ಅಹ್ಮದ್, ಮೆಹೆದ್ ಹಸನ ಮಿರಾಝ್ ಮತ್ತು ತೈಜುಲ್ ಇಸ್ಲಾಂ ತಲಾ 1 ವಿಕೆಟ್ ಪಡೆದಿದ್ದಾರೆ.

ಸ್ಕೋರ್ ಪಟ್ಟಿ
ಭಾರತ ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ 356/3
             ಕೆ.ಎಲ್.ರಾಹುಲ್ ಬಿ ಅಹ್ಮದ್ 02
        ಮುರಳಿ ವಿಜಯ್ ಬಿ ತೈಜುಲ್ ಇಸ್ಲಾಂ108
         ಚೇತೇಶ್ವರ ಪೂಜಾರಸಿ ರಹೀಮ್ ಬಿ ಮಿರಾಝ್ 83
            ವಿರಾಟ್ ಕೊಹ್ಲಿ ಔಟಾಗದೆ111
            ಅಜಿಂಕ್ಯ ರಹಾನೆ ಔಟಾಗದೆ45
                    ಇತರೆ07
ವಿಕೆಟ್ ಪತನ: 1-2, 2-180, 3-234
ಬೌಲಿಂಗ್ ವಿವರ
        ತಾಸ್ಕಿನ್ ಅಹ್ಮದ್ 16-2-58-1
        ಕಮ್ರುಲ್ ಇಸ್ಲಾಂ 17-1-91-0
        ಸೌಮ್ಯ ಸರ್ಕಾರ್01-0-04-0
    ಮೆಹಾದಿ ಹಸನ್ ಮಿರಾಝ್20-0-93-1
    ಶಾಕಿಬ್ ಅಲ್ ಹಸನ್13-3-45-0
        ತೈಜುಲ್ ಇಸ್ಲಾಂ20-4-50-1
        ಶಬ್ಬಿರ್ ರಹ್ಮಾನ್ 03-0-10-0

,,,,,,,

share
ವಾರ್ತಾಭಾರತಿ
ವಾರ್ತಾಭಾರತಿ
Next Story
X