ರಾಜಕೀಯಕ್ಕೆ ಬರುವುದಿಲ್ಲ ಎಂದು ಶಶಿಕಲಾ ಜಯಲಲಿತಾರಿಗೆ ಹೇಳಿದ್ದರು: ಪತ್ರ ತೋರಿಸಿದ ಪನ್ನೀರ್ ಸೆಲ್ವಂ

ಚೆನ್ನೈ, ಫೆ.9: ಜಯಲಲಿತಾರೊಡನೆ ತನಗೆ ರಾಜಕೀಯದಲ್ಲಿಆಸಕ್ತಿಯಿಲ್ಲ ಎಂದು ಈಗಿನ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹೇಳಿದ್ದರೆಂದು ಪನ್ನೀರ್ ಸೆಲ್ವಂ ತಿಳಿಸಿದ್ದಾರೆ. ಚೆನ್ನೈಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈವಿಷಯವನ್ನು ಬಹಿರಂಗಪಡಿಸಿದ್ದಾರೆ.
ತನ್ನ ಆರೋಪಕ್ಕೆ ಪುರಾವೆಯಾಗಿ ಜಯಲಲಿತಾ 2011ರಲ್ಲಿ ಬರೆದಿದ್ದ ಪತ್ರವನ್ನು ಪನ್ನೀರ್‌ಸೆಲ್ವಂಪತ್ರಿಕಾಗೋಷ್ಠಿಯಲ್ಲಿ ಓದಿದ್ದಾರೆ. ತನ್ನ ಕೃತ್ಯಕ್ಕೆ ಕ್ಷಮೆಯಾಚಿಸುತ್ತಿದ್ದೇನೆ ಯಾವತ್ತೂ ತಾನು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಪತ್ರದಲ್ಲಿ ಶಶಿಕಲಾ ತಿಳಿಸಿದ್ದಾರೆಂದು ಪನ್ನೀರ್ ಸೆಲ್ವಂ ಬೆಟ್ಟು ಮಾಡಿದ್ದಾರೆ. ಯಾರು ಈಗ ಅಮ್ಮನನ್ನು ವಂಚಿಸಿದ್ದು ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿಯಾಗಲು ಶಶಿಕಲಾ ನೀಚ ಆಟವಾಡುತ್ತಿದ್ದಾರೆ. ಅವರು ಜಯಿಸಿದರೆ ಪ್ರಜಾಪ್ರಭುತ್ವಕ್ಕೇ ಕಳಂಕ ತಟ್ಟಲಿದೆ. ಶಶಿಕಲಾ ನಿಜವಾದ ಸಂಚುಕೋರ ಮಹಿಳೆಯಾಗಿದ್ದಾರೆ. ಮಧುಸೂಧನನ್ ಪಕ್ಷದ ಪ್ರಧಾನಕಾರ್ಯದರ್ಶಿ ಆಗಬೇಕೆಂದು ಅಮ್ಮನ ಆಗ್ರಹವಾಗಿತ್ತು. ಪಕ್ಷವನ್ನು ಒಡೆಯಲು ತಾನು ಪ್ರಯತ್ನಿಸಿಲ್ಲ ಎಂದು ಪನ್ನೀರ್‌ಸೆಲ್ವಂ ಹೇಳಿದ್ದಾರೆ.





