ಫೆ.12ರಂದು ಎಸ್ಸೆಸ್ಸೆಫ್ ಪಾನೇಲ ಶಾಖೆ ವತಿಯಿಂದ ರಕ್ತದಾನ ಶಿಬಿರ
ಕೊಣಾಜೆ, ಫೆ.9: ಎಸ್ಸೆಸ್ಸೆಫ್ ಪಾನೇಲ ಶಾಖೆಯ ವತಿಯಿಂದ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವು ಕೆ.ಎಂ.ಸಿ ಆಸ್ವತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಫೆ.12ರಂದು ರವಿವಾರ ಹಯಾತುಲ್ ಇಸ್ಲಾಂ ಮದರಸ ಪಾನೇಲದಲ್ಲಿ ನಡೆಯಲಿದೆ.
ಕಾರ್ಯಕ್ರಮವು ಎಸ್ಸೆಸ್ಸೆಫ್ ಪಾನೇಲ ಶಾಖೆಯ ಅಧ್ಯಕ್ಷ ಅಶ್ರಫ್ ಪಾನೇಲರವರ ಅಧ್ಯಕ್ಷತೆಯಲ್ಲಿ ಹಾಗೂ ಸ್ಥಳೀಯ ಖತೀಬರಾದ ಎಂ.ಕೆ ಅಬ್ದುರ್ರಹ್ಮಾನ್ ಸಖಾಫಿ ಪಾನೇಲರವರ ದುಆದೊಂದಿಗೆ ನಡೆಯಲಿರುವುದು.
ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನವನ್ನು ಮಾಡಿ ಸಹಕರಿಸುವಂತೆ ಎಸ್ಸೆಸ್ಸೆಫ್ ಪಾನೇಲ ಶಾಖಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬಾಕಿಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





