ಫೆ.10ರಿಂದ ಮಾರಿಪಳ್ಳದಲ್ಲಿ ಮತಪ್ರವಚನ
ಮಂಗಳೂರು, ಫೆ.9: ಮಾರಿಪಳ್ಳ ನಾಗರಿಕ ಸಮಿತಿ ಪುದುಪೇಟೆ ಇದರ ವತಿಯಿಂದ ಫೆ.10ರಿಂದ 12ರವರೆಗೆ ಸಂಜೆ 7ರಿಂದ ಮಾರಿಪಳ್ಳ ಜಂಕ್ಷನ್‌ನಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಕವಿ ಮುಹಮ್ಮದ್ ಮಾರಿಪಳ್ಳ ಕಾರ್ಯಕ್ರಮ ಉದ್ಘಾಟಿಸಲಿದ್ದು,ಯುನಿವೆಫ್ ವೆಲ್‌ಫೇರ್ ಫೋರಂ ಸಂಚಾಲಕ ಮುಹಮ್ಮದ್ ಸಲೀಂ ಅಧ್ಯಕ್ಷತೆ ವಹಿಸಲಿದ್ದಾರೆ. ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ತಂದೆ, ತಾಯಿ ಮತ್ತು ಮಕ್ಕಳು’ ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಫೆ.11ರಂದು ‘ನಮಾಝ್ ಸ್ವರ್ಗದ ಹಾದಿ’ ಎಂಬ ವಿಷಯದಲ್ಲಿ ರಫೀಉದ್ದೀನ್ ಕುದ್ರೋಳಿ ಭಾಷಣ ಮಾಡಲಿದ್ದಾರೆ.
ಫೆ.12ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ತುಂಬೆ ಮತ್ತು ಯುನಿವೆಫ್ ರಾಜ್ಯ ಕಾರ್ಯದರ್ಶಿ ಯು.ಕೆ.ಖಾಲಿದ್ ಅತಿಥಿಗಳಾಗಿ ಭಾಗವಹಿಸುವರು.
ಮೂಡನಂಬಿಕೆ ಮತ್ತು ಹರಾಂ ಎಂಬ ವಿಷಯದಲ್ಲಿ ರಫೀಯುದ್ದೀನ್ ಕುದ್ರೋಳಿ ಮುಖ್ಯಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





