ಬ್ರಿಟನ್‌ನೊಂದಿಗೆ 15 ಗಡಿಪಾರು ಕೋರಿಕೆಗಳು ಬಾಕಿ:ವಿ.ಕೆ.ಸಿಂಗ್

ಹೊಸದಿಲ್ಲಿ,ಫೆ.9: ಬ್ರಿಟನ್ ಸರಕಾರದ ಬಳಿ 15 ಗಡಿಪಾರು ಮನವಿಗಳು ಬಾಕಿಯಿದ್ದು, ಅವು ಆದೇಶ ಜಾರಿಯ ವಿವಿಧ ಹಂತಗಳಲ್ಲಿವೆ ಎಂದು ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಅವರು ಗುರುವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರು ಸುಮಾರು ಮೂರು ತಿಂಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ಸಂದರ್ಭ, ದೇಶಭ್ರಷ್ಟರು ಮತ್ತು ಕ್ರಿಮಿನಲ್‌ಗಳು ಕಾನೂನಿನ ಕೈಗಳಿಂದ ಪಾರಾಗಲು ಅವಕಾಶ ನೀಡಬಾರದು ಎಂದು ಉಭಯ ನಾಯಕರು ಒಪ್ಪಿಕೊಂಡಿದ್ದರು ಎಂದು ಸಿಂಗ್ ಹೇಳಿದರು.
ಉಭಯ ದೇಶಗಳಲ್ಲಿ ಬಾಕಿಯಿರುವ ಗಡೀಪಾರು ಕೋರಿಕೆಗಳನ್ನು ಇತ್ಯರ್ಥಗೊಳಿಸಲು ಉಭಯ ನಾಯಕರು ಬದ್ಧತೆಯನ್ನು ವ್ಯಕ್ತಪಡಿಸಿದ್ದರು ಎಂದೂ ಸಿಂಗ್ ತಿಳಿಸಿದರು.
Next Story





