ಸುಳ್ಯ: ಫೆಬ್ರವರಿ 14ರಿಂದ ಬ್ರಹ್ಮಕಲಶೋತ್ಸವ ಆರಂಭ
ಸುಳ್ಯ, ಫೆ. 9: ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪತ್ರಿಕಾಗೋಷ್ಠಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ ಬ್ರಹ್ಮಕಲಶೋತ್ಸವದ ಕುರಿತು ವಿವರಣೆ ನೀಡಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಮಾಹಿತಿ ನೀಡಿದರು. ಫೆಬ್ರವರಿ 14ರಿಂದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಆರಂಭವಾಗಲಿದ್ದು, ವೈದಿಕ, ಧಾರ್ಮಿಕ ಕಾರ್ಯಕ್ರಮಗಳು 9 ದಿನಗಳ ಕಾಲ ನಡೆಯಲಿವೆ.
ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸಂಯೋಜಕರಾದ ನ.ಸೀತಾರಾಮ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಅಡ್ಕಾರು, ಜಯರಾಮ ರೈ ಜಾಲ್ಸೂರು, ಕೋಶಾಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಭಾಸ್ಕರ ಗೌಡ ಪಟೇಲ್‌ಮನೆ, ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ ಅಡ್ಕಾರು, ಜಯರಾಜ್ ಕುಕ್ಕೇಟಿ, ಕೋಶಾಧ್ಯಕ್ಷ ದಿನೇಶ್ ಅಡ್ಕಾರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಭಟ್ ಅಡ್ಕಾರು, ಸದಸ್ಯರುಗಳಾದ ಕುಶಾಲಪ್ಪ ಗೌಡ ಕುಕ್ಕೇಟಿ, ಹರಿಪ್ರಕಾಶ್ ಅಡ್ಕಾರು, ಜಯಂತ ಗೌಡ ಕಾಳಂಮ್ಮನೆ, ಲಿಂಗಪ್ಪ ನಾಯ್ಕ ವಿನೋಬಾನಗರ, ಮಮತಾ ಅಡ್ಕಾರು, ಮಾಧವ ಗೌಡ ಕಾಳಂಮ್ಮನೆ, ಮೋಹನ ಪಾಟಾಳಿ ಮಹಾಬಲಡ್ಕ, ಭಾಸ್ಕರ ಅಡ್ಕಾರುಬೈಲು ಉಪಸ್ಥಿತರಿದ್ದರು.







