ಪಡೀಲ್: ಸುನ್ನಿ ಜಮಾಅತ್‌ನಿಂದ ಹಣ್ಣುಹಂಪಲು ವಿತರಣೆ

ಮಂಗಳೂರು, ಫೆ.9: ನಗರದ ಪಡೀಲ್ ಮಸ್ಜಿದುರ್ರಹ್ಮಾನ್ ಸುನ್ನಿ ಜಮಾಅತ್ ವತಿಯಿಂದ ಶೈಕ್ ರಿಫಾಯಿ (ರ)ರವರ ಸ್ಮರಣಾರ್ಥ ಬಡ,ಅನಾಥ, ನಿರ್ಗತಿಕ ಬುದ್ಧಿಮಾಂಧ್ಯ ,ಅಂಗವಿಕಲರ ವೃದ್ಧಾಶ್ರಮಗಳಿಗೆ ಆಹಾರ ವಿತರಣೆ ಮತ್ತು ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಜರಗಿತು.
ಮಸ್ಜಿದುರ್ರಹ್ಮಾನ್ ಸುನ್ನಿ ಜಮಾಅತ್ ಇಮಾಮ್ ಹಾಫಿಳ್ ಅನಸ್ ಅಹ್ಸನಿ ನೆಲ್ಯಾಡಿ, ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕರಾವಳಿ, ಉಪಾಧ್ಯಕ್ಷರಾದ ಹಾಜಿ ಶಕೀರ್ ಅಹ್ಮದ್ ಹೈಸಂ, ಹಾಜಿ ಅಬ್ದುಲ್ಲತೀಫ್ ಗೋಲ್ಡನ್, ಕೋಶಾಧಿಕಾರಿ ಇ.ಕೆ. ರಫೀಕ್ ಕಣ್ಣೂರು, ಸೈಯದ್ ಅಶ್ರಫ್, ಸೈಯದ್ ಇಸಾಕ್ ತಂಙಳ್ ಉಜಿರೆ, ಶಫಿ ನಾಗುರಿ, ಹಾಜಿ ಡಿ.ಕೆ. ಅಹ್ಮದ್ ಬಾವಾ, ಮನ್ಸೂರ್ ಮತ್ತಿತರರು ಉಪಸ್ಥಿತರಿದ್ದರು.
Next Story





