ಟಿಪ್ಪರ್ - ಬೈಕ್ ಢಿಕ್ಕಿ: ತಂದೆ ಮೃತ್ಯು, ಮಗ ಗಂಭೀರ

ಕಡಬ, ಫೆ.9. ಇಲ್ಲಿಗೆ ಸಮೀಪದ ಕಳಾರ ಎಂಬಲ್ಲಿ ಬೈಕೊಂದಕ್ಕೆ ಟಿಪ್ಪರ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಸಹಸವಾರ ತಂದೆ ಮೃತಪಟ್ಟು ಸವಾರ ಮಗ ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಪೆರಾಬೆ ಗ್ರಾಮದ ಮಾಯಿಲ್ಗ ನಿವಾಸಿ ಚೆನ್ನಪ್ಪ ಗೌಡ ಹಾಗೂ ಗಂಭೀರ ಗಾಯಗೊಂಡಿರುವವರನ್ನು ಪುತ್ರ ಜಗದೀಶ್ ಎಂದು ಗುರುತಿಸಲಾಗಿದೆ.
ಇವರು ಟಿವಿಎಸ್ ಅಪಾಚಿ ಬೈಕಿನಲ್ಲಿ ಕಡಬದಿಂದ ಆಲಂಕಾರಿಗೆ ತೆರಳುತ್ತಿದ್ದಾಗ ಕಳಾರ ಎಂಬಲ್ಲಿ ಗದ್ದೆಗೆ ಮಣ್ಣು ತುಂಬಿಸಿ ರಸ್ತೆಗೆ ಆಗಮಿಸಿದ ಟಿಪ್ಪರ್ ಢಿಕ್ಕಿ ಹೊಡೆದುದರ ಪರಿಣಾಮ ರಸ್ತೆಗೆಸೆಯಲ್ಪಟ್ಟಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಹಿಂಬದಿ ಸವಾರ ಚೆನ್ನಪ್ಪ ಗೌಡರು ಮೃತಪಟ್ಟರೆನ್ನಲಾಗಿದೆ.
ಗಂಭೀರ ಗಾಯಗೊಂಡಿರುವ ಜಗದೀಶರವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣವೇ ಕಡಬ ಪೊಲೀಸರು ಸ್ಥಳಕ್ಕೆ ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story





