ವಿಶ್ವದ ಅತೀ ದೊಡ್ದ ಕೊಲಾಜ್‌ಗಾಗಿ ಪ್ರಯತ್ನ !

ಉಡುಪಿ, ಫೆ.9: ಮಂಗಳೂರಿನ ನೆಹರು ಮೈದಾನದಲ್ಲಿ ಫೆ.12ರಂದು ನಡೆಯುವ ದೇಶದ ಮೊದಲ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ವೆಂಕಿ ಪಲಿಮಾರು ರಚಿಸಿದ ಬೃಹತ್ ಕೊಲಾಜ್ ಕಲಾಕೃತಿಯ ಮೂಲಕ ವಿವೇಕಾನಂದರ ಭಾವಚಿತ್ರದ ಪ್ರದರ್ಶನ ನಡೆಯಲಿದೆ.
ಈ ಕಲಾಕೃತಿಯು ವಿಶ್ವದ ಅತೀ ದೊಡ್ಡ ಕೊಲಾಜ್ ಕಲಾಕೃತಿ ಎಂಬ ಮನ್ನಣೆ ಪಡೆಯಲಿದೆ. ಕಲಾಕೃತಿಯನ್ನು ರಚಿಸಲು ಮುಲ್ಕಿಯ ಕೆ.ಪಿ.ಎಸ್.ಕೆ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಹಕರಿಸಿದ್ದರು.
ಈ ಕಲಾಕೃತಿ 352 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಮಣಿಪಾಲ್ ಸ್ಯಾಂಡ್‌ಹಾರ್ಟ್ ಮತ್ತು ಆರ್ಟಿಸ್ಟ್ ಫಾರಂನ ಕಲಾವಿದರಾದ ವೆಂಕಿ ಪಲಿಮಾರು, ಮುಲ್ಕಿ ಕೆ.ಪಿ.ಎಸ್. ಕೆ.ಪ್ರೌಢ ಶಾಲೆಯ ಕಲಾ ಶಿಕ್ಷಕರು, ಈ ಕಲಾಕೃತಿಯನ್ನು ರಚಿಸಲು ಸಾವಿರಾರು ಹಳೆ ಪತ್ರಿಕೆಯ ಕಾಗದ ಹಾಗೂ ಗಮ್ ಬಳಸಿದ್ದಾರೆ.
Next Story