ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹರಿಕೃಷ್ಣ ಪುನರೂರು ಆಯ್ಕೆ

ಹೆಬ್ರಿ, ಫೆ.9: ಕನ್ನಡ ಸೇನಾನಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ, ನಮ ತುಳುವೆರ್ ಕಲಾ ಸಂಘಟನೆ, ನಾಟ್ಕದೂರು ಮುದ್ರಾಡಿ ಇವರ ಸಹಕಾರದೊಂದಿಗೆ ಫೆ.11ರ ಹುಣ್ಣಿಮೆಯ ದಿನದಂದು ಮುಸ್ಸಂಜೆಯಿಂದ ಮರುದಿನ ಬೆಳಗಿನವರೆಗೆ ಮುದ್ರಾಡಿ ನಾಟ್ಕದೂರು ಚೌಟರ ಬಯಲು ರಂಗಮಂದಿರದಲ್ಲಿ 8ನೇ ಅಖಿಲ ಕರ್ನಾಟಕ ಬೆಳದಿಂಗಳ ಸಮ್ಮೇಳನ ನಡೆಯಲಿದೆ.
Next Story





