ಮಣಿಪಾಲ: ಗೃಹ ಉತ್ಪನ್ನಗಳ ತರಬೇತಿಗೆ ಅರ್ಜಿ ಆಹ್ವಾನ
ಮಣಿಪಾಲ, ಫೆ.9: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಆಸಕ್ತ ಮಹಿಳೆಯರು ಹಾಗೂ ಯುವತಿಯರಿಗೆ ಫೆ.27ರಿಂದ ಮಾ.3ರವರೆಗೆ ಗೃಹ ಉತ್ಪನ್ನಗಳಾದ ಸಾಂಬಾರು ಹುಡಿ, ಹಪ್ಪಳ, ಜ್ಯಾಮ್, ಸೆಂಡಿಗೆ, ಫಿನಾಯಿಲ್ ತಯಾರಿಕೆ, ಪೇಪರ್ ಮತ್ತು ಬಟ್ಟೆ ಬ್ಯಾಗುಗಳ ತಯಾರಿಕೆ ಹಾಗೂ ಗೃಹ ನಿರ್ವಹಣೆಯ ಕುರಿತು 5 ದಿನಗಳ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಸ್ವಉದ್ಯೋಗ ಕೈಗೊಳ್ಳಲು ಇಚ್ಚಿಸುವ ಮಹಿಳೆಯರು ಸಹ ಈ ತರಬೇತಿಯಲ್ಲಿ ಭಾಗವಹಿಸಬಹುದು. ತರಬೇತಿಯ ಸಮಯದಲ್ಲಿ ಉಚಿತ ಊಟ ಮತ್ತು ದೂರದಿಂದ ಬರುವವರಿಗೆ ವಸತಿ ವ್ಯವಸ್ಥೆಯಿದೆ.
ಆಸಕ್ತರು ತಮ್ಮ ಭಾಗವಹಿಸುವಿಕೆಯನ್ನು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಅಂಬಾಗಿಲು ರಸ್ತೆ, ಉಡುಪಿ (ದೂರವಾಣಿ:0820-2570263) ಇಲ್ಲಿಗೆ ಸಂಪರ್ಕಿಸುವ ಮೂಲಕ ಫೆ.22ರೊಳಗೆ ದೃಢೀಕರಿಸಬೇಕು. ತರಭೇತಿ ಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಫೆ.27ರಂದು ಬೆಳಿಗ್ಗೆ 9:30ಕ್ಕೆ ಬಿವಿಟಿ ಯಲ್ಲಿ ಹಾಜರಿರಬೇಕು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದ.
Next Story





