ಬಂಟ್ವಾಳ: ಫೆ.11ರಂದು ಅಜಿಲಮೊಗರು ಮಾವಿನಕಟ್ಟೆಗೆ ಪೆರೋಡ್ ಉಸ್ತಾದ್

ಬಂಟ್ವಾಳ, ಫೆ. 9: ಅಜಿಲಮೊಗರು ಮಾವಿನಕಟ್ಟೆ ಫಖ್ರುದ್ದೀನ್ ಜುಮಾ ಮಸೀದಿ, ಎಸ್‌ವೈಎಸ್, ಎಸ್ಸೆಸ್ಸೆಫ್ ಇದರ ಜಂಟಿ ಆಶ್ರಯದಲ್ಲಿ ಫೆಬ್ರವರಿ 11ರಂದು ಸಂಜೆ 6 ಗಂಟೆಗೆ ಮಾವಿನಕಟ್ಟೆ ತಾಜುಲ್ ಉಲಮಾ ವೇದಿಕೆಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಬಂಟ್ವಾಳ ಡಿವಿಜನ್ ಅಧ್ಯಕ್ಷ ಅಬ್ದುಲ್ ರಶೀದ್ ವಗ್ಗ ತಿಳಿಸಿದರು.
ಗುರುವಾರ ಸಂಜೆ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಸ್ಮರಣಾ ಕಾರ್ಯಕ್ರಮವನ್ನು ಎಎಂಇಸಿ ಮಾಡಡ್ಕ ಮ್ಯಾನೇಜರ್ ಕೆ.ಎ.ಅಶ್ರಫ್ ಸಖಾಫಿ ಮಾಡಾವು ಉದ್ಘಾಟಿಸಲಿದ್ದು, ಕುಟ್ಯಾಡಿ ಸಿರಾಜುಲ್ ಹುದಾದ ಪ್ರಾಂಶುಪಾಲ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಸೈಯದ್ ಹಂಝ ತಂಞಳ್ ಕರ್ಪಾಡಿ ದುಅ ಆಶೀರ್ವಚನ ನೀಡಲಿದ್ದು, ಅಜಿಲಮೊಗರು ಎಫ್‌ಜೆಎಂ ಮಾಜಿ ಖತೀಬ್ ಹಾಜಿ ಅಬ್ದುಲ್ ಹಮೀದ್ ಮದನಿ ಅಧ್ಯಕ್ಷತೆ ವಹಿಸಲಿದ್ದಾರೆ. ಖಾದಿಸಿಯ ಇಸ್ಲಾಮಿಕ್ ಮತ್ತು ವಿಜ್ಞಾನ ಅಕಾಡಮಿ ಕಾವಳಕಟ್ಟೆಯ ಪ್ರಾಂಶುಪಾಲ ಹಾಫಿಲ್ ಸುಫಿಯಾನ್ ಸಖಾಫಿ ಮತ್ತು ಮಲ್ಲೂರು ಅಲ್ ಅಸಾಸ್ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಭಾಷಣಗೈಯುವರು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಜಿಲಮೊಗರು ಎಫ್‌ಜೆಎಂ ಮಾಜಿ ಖತೀಬ್ ಹಾಜಿ ಅಬ್ದುಲ್ ಹಮೀದ್ ಮದನಿ ಗೌರವಾರ್ಪಣೆ ನಡೆಯಲಿದ್ದು ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಜೆಎಂ ಸರಳಿಕಟ್ಟೆ ಮುದರಿಸ್ ಕೆ.ಬಿ.ಅಬ್ಬಾಸ್ ಸಅದಿ, ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಜಿ ಎಸ್.ಪಿ.ಹಂಝ ಸಖಾಫಿ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾವಿನಕಟ್ಟೆ ಎಫ್‌ಜೆಎಂ ಅಧ್ಯಕ್ಷ ಅಬ್ಬಾಸ್ ಅಂತಾರ, ಖತೀಬ್ ಅಬ್ದುಲ್ ಜಬ್ಬಾರ್ ಸಅದಿ, ಮಾವಿನಕಟ್ಟೆ ಎಸ್ಸೆಸ್ಸೆಫ್ ಅಧ್ಯಕ್ಷ ಮುಹಮ್ಮದ್ ಶರೀಫ್, ಎಸ್‌ವೈಎಸ್ ಅಧ್ಯಕ್ಷ ಹುಸೈನ್ ಎಚ್., ಮಾವಿನಕಟ್ಟೆ ಸ್ವಲಾತ್ ಕಮಿಟಿ ಅಧ್ಯಕ್ಷ ಅಬ್ಬಾಸ್ ಕೆ. ಉಪಸ್ಥಿತರಿದ್ದರು.







