ಫೆ. 14ಕ್ಕೆ ಹೊಸದಿಲ್ಲಿ ಎನ್‌ಎಸ್‌ಡಿಯಲ್ಲಿ ಯಕ್ಷಗಾನ ತಾಳಮದ್ದಲೆ
ಉಡುಪಿ, ಫೆ.9: ಯಕ್ಷಗಾನ ಕಲಾರಂಗದ ತಂಡವೊಂದು ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯಲ್ಲಿ ಆಯೋಜಿಸಲಾಗುವ 19ನೇ ಭಾರತ ರಂಗ ಮಹೋತ್ಸವದಲ್ಲಿ ಭಾಗವಹಿಸಲಿದೆ.
ಫೆ.14ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪ್ರೊ.ಎಂ.ಎಲ್ ಸಾಮಗ ನೇತೃತ್ವದ ಎಂಟು ಮಂದಿ ಕಲಾವಿದರ ತಂಡ ಯಕ್ಷಗಾನ ತಾಳಮದ್ದಲೆ ‘ವಾಲಿ ವಧೆ’ ಪ್ರಸಂಗವನ್ನು ಪ್ರಸ್ತುತ ಪಡಿಸಲಿದೆ.
ರಮೇಶ್ ಭಟ್ ಪುತ್ತೂರು, ಅಕ್ಷಯ್ ವಿಟ್ಲ, ಶ್ರೀಶ ನಿಡ್ಲೆ ಹಿಮ್ಮೇಳ ಕಲಾವಿದರಾಗಿ ಹಾಗೂಸರ್ಪಂಗಳ ಈಶ್ವರ ಭಟ್, ತಲಪಾಡಿ ಸದಾಶಿವ ಆಳ್ವ, ನಾರಾಯಣ ಎಂ ಹೆಗಡೆ, ಪ್ರಥ್ವಿರಾಜೇಶ್ ಕುಮಾರ್ ಅರ್ಥಧಾರಿಗಳಾಗಿ ಭಾಗವಹಿಸಲಿದ್ದಾರೆ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





