ಫೆ.10ರಂದು ಉಳ್ಳಾಲದಿಂದ ಸಂದೇಶ ಯಾತ್ರೆ
ಮಂಗಳೂರು, ಫೆ. 9: ನಗರದ ನೆಹರೂ ಮೈದಾನದಲ್ಲಿ ಫೆ. 18ರಂದು ನಡೆಯಲಿರುವ ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕ ಮಹಾ ಸಂಭ್ರಮದ ಪ್ರಚಾರಾರ್ಥ ಫೆ.10ರಂದು ಮಧ್ಯಾಹ್ನ ಜುಮಾ ನಮಾಝ್‌ನ ನಂತರ ಉಳ್ಳಾಲ ದರ್ಗಾ ಝಿಯಾರತ್‌ನೊಂದಿಗೆ ಲೆಹರಿ ಮುಕ್ತ ಸಮಾಜ ಎಂಬ ಘೋಷಣೆಯೊಂದಿಗೆ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ರ್ಯಾಲಿಗೆ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಹಾಗೂ ದ.ಕ. ಜಿಲ್ಲಾ ಜಮೀಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರ ಕೆ. ಎಲ್. ಉಮರು ದಾರಿಮಿ ಹಾಗೂ ಎಸ್‌ಬಿ ದ.ಕ. ಜಿಲ್ಲಾ ಚೇರ್‌ಮಾನ್ ಸಿದ್ಧೀಕ್ ಫೈಝಿ ಕರಾಯರವರ ನೇತೃತ್ವದಲ್ಲಿ ಯಾತ್ರೆಗೆ ಉಳ್ಳಾಲ ದರ್ಗ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ಸಮಸ್ತದ ಪತಾಕೆಯನ್ನು ನೀಡಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
10 ದಿವಸಗಳ ಕಾಲ ಕರ್ನಾಟಕದಲ್ಲಿ ನಡೆಯುವ ಸಂದೇಶ ಯಾತ್ರೆಯು ಶನಿವಾರ ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಂಗಳೂರು ಜಿಲ್ಲೆಯ ಮೂಡಗೆರೆ ಸಿಟಿಯಲ್ಲಿ ಸಂದೇಶ ಯಾತ್ರೆ ಸ್ವೀಕಾರ ನೀಡಲಿದ್ದಾರೆ ಎಂದುಮುಸ್ತಫ ಫೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





