ಕಟೀಲು ದರೋಡೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

ಮಂಗಳೂರು, ಫೆ.9: ಕಟೀಲು ಶ್ರಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಅವರ ಮನೆಯಲ್ಲಿ ನ.4ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಬಜಪೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ತೆಂಕ ಎಕ್ಕಾರಿನ ಪ್ರದೀಪ್ ಶೆಟ್ಟಿ (22) ಬಂಧಿತ ಆರೋಪಿಯಾಗಿದ್ದು, ಇದರೊಂದಿಗೆ ಬಂಧಿತರಾದವರ ಸಂಖ್ಯೆ 12ಕ್ಕೇರಿದಂತಾಗಿದೆ. ಆರೋಪಿ ಪ್ರದೀಪ್ ಶೆಟ್ಟಿ ವೃತ್ತಿಯಲ್ಲಿ ಚಾಲಕನಾಗಿದ್ದಾನೆ.
Next Story





