ಬ್ರಿಟನ್‌ನ ಪ್ರಮುಖ ಸಿನೆಮಾ ಚಿತ್ರಕಥೆಗಾರ ಅಲನ್ ಸಿಂಪ್ಸನ್ ನಿಧನ

ಲಂಡನ್,ಫೆ. 10: ಪ್ರಮುಖ ಚಿತ್ರಕಥೆಗಾರ ಅಲನ್ ಸಿಂಪ್ಸನ್(87) ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಟಿವಿ ಸೀರಿಯಲ್, ಸಿನೆಮಾ, ಸ್ಟೇಜ್ ಶೋಗಳಿಗೆ ಅವರು ಚಿತ್ರಕಥೆ ಬರೆದು ಜನಪ್ರಿಯರಾಗಿದ್ದರು. ಹಾನ್‌ಕಾಕ್ಸ್ ಹಾಫ್ ಅವರ್, ಸ್ಟೈಪ್ಟೊ ಆ್ಯಂಡ್ ಸನ್ ಎನ್ನುವ ಟಿವಿ ಸೀರಿಯಲ್‌ಗಳು ಹೆಚ್ಚು ಪ್ರಸಿದ್ಧವಾಗಿವೆ.
ರೆಗೋಲ್ಟನ್‌ರೊಂದಿಗೆ ಸೇರಿ ಸಿಂಪ್ಸನ್ ಬರೆದ ಚಿತ್ರಕಥೆಗಳು ಹೆಚ್ಚು ಜನಪ್ರಿಯವಾಗಿವೆ. ಎಳವೆಯಲ್ಲಿ ಟಿಬಿ ರೋಗದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸಿಂಪ್ಸನ್ ಮತ್ತು ರೆಗೊಲ್ಟನ್ ಪರಿಚಿತರಾಗಿದ್ದರು. ನಂತರ ಅವರ ಜೋಡಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಯಿತು. ಹಾಸ್ಯ ಸರಣಿಗಳ ಸೃಷ್ಟಿಗೆ ಇದು ಅವರನ್ನು ಪ್ರೇರೇಪಿಸಿತ್ತು. ಇವರಿಬ್ಬರಿಗೂ 2016ರಲ್ಲಿ ಬಾಫ್ಟ್ ಪ್ರಶಸ್ತಿ ಲಭಿಸಿದೆ ಎಂದು ವರದಿಯಾಗಿದೆ.
Next Story





