ಕಳಪೆ ಆಹಾರ ಬಗ್ಗೆ ದೂರಿದ್ದ ಬಿ ಎಸ್ ಎಫ್ ಜವಾನನನ್ನು ಬಂಧಿಸಲಾಗಿಲ್ಲ, ಅವರು ಸಾಂಬಾದಲ್ಲಿದ್ದಾರೆ
ಕೋರ್ಟಿಗೆ ಮಾಹಿತಿ ನೀಡಿದ ಸರಕಾರ

ಹೊಸದಿಲ್ಲಿ,ಫೆ.10: ಬಿ ಎಸ್ ಎಫ್ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆಯೆಂದು ದೂರಿ ವೀಡಿಯೋ ಪೋಸ್ಟ್ ಮಾಡಿದ್ದ ಜವಾನ ತೇಜ್ ಬಹಾದುರ್ ಯಾದವ್ ರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹಬ್ಬಿರುವ ನಡುವೆಯೇ ಅವರನ್ನು ಜಮ್ಮು ಕಾಶ್ಮೀರದ ಸಾಂಬ ಜಿಲ್ಲೆಯ ಇನ್ನೊಂದು ಬೆಟಾಲಿಯನ್ನಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಇಂದು ದೆಹಲಿ ಹೈಕೋರ್ಟಿಗೆ ಮಾಹಿತಿ ನೀಡಿತು.ವಾರಾಂತ್ಯದಲ್ಲಿ ಯಾದವ್ ಪತ್ನಿಗೆ ಅವರನ್ನು ಭೇಟಿಯಾಗಲು ಸಾಂಬದಲ್ಲಿ ಅವಕಾಶ ನೀಡಬೇಕೆಂದೂ ನ್ಯಾಯಾಲಯ ಆದೇಶಿಸಿದೆ.
ತನ್ನ ಪತಿ ಎಲ್ಲಿದ್ದಾರೆಂದು ತಿಳಿಯದಾಗಿದೆ ಎಂದು ದೂರಿ ಯಾದವ್ ಪತ್ನಿದೆಹಲಿ ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದರು. ಬಿಎಸ್‌ಎಫ್ ನಿರ್ದೇಶಕರಿಗೆ ತಮ್ಮ ಕುಟುಂಬ ಎರಡು ಪತ್ರಗಳನ್ನು ಬರೆದಿದ್ದರೂ ಯಾವುದೇ ಮಾಹಿತಿ ನೀಡಿಲ್ಲವೆಂದೂ ದೂರಲಾಗಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 15ಕ್ಕೆ ನಿಗದಿ ಪಡಿಸಲಾಗಿದೆ.
Next Story





