ಸೌದಿ ಅರೇಬಿಯದಲ್ಲಿ ಭಾರತದ ಸಿಗಡಿಗೆ ನಿಷೇಧ

ಜಿದ್ದ, ಫೆ.10: ಸೌದಿ ಅರೇಬಿಯಕ್ಕೆ ಕರ್ನಾಟಕವೂ ಸೇರಿ ಭಾರತದ ಒಂಬತ್ತು ರಾಜ್ಯಗಳಿಂದ ಸಿಗಡಿಮೀನು ತರಿಸಿಕೊಳ್ಳುವುದಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ಸೌದಿ ಫುಡ್ ಆ್ಯಂಡ್ ಡ್ರಗ್ಸ್ ಅಥಾರಿಟಿ ಮುಂದುವರಿಸಿದೆ. ವೈಟ್‌ಸ್ಪೋಟ್ ಸಿಂಡ್ರೋಂ ವೈರಸ್ ಬಾಧೆಯಿದೆ ಎಂದು ವೈಲ್ಡ್ ಅನಿಮಲ್ ಹೆಲ್ತ್ ಆರ್ಗನೈಝೇಶನ್‌ನ ವರದಿಯ ಆಧಾರದಲ್ಲಿ ಆರು ತಿಂಗಳಿಗೆ ನಿಷೇಧವನ್ನು ಸೌದಿಅರೇಬಿಯ ವಿಸ್ತರಿಸಿದೆ.
ಆಂಧ್ರಪ್ರದೇಶ, ಕೇರಳ, ಗುಜರಾತ್, ಗೋವಾ, ಕರ್ನಾಟಕ ರಾಜ್ಯಗಳಿಂದ ಸೌದಿ ಅರೇಬಿಯಕ್ಕೆ ಸಿಗಡಿ ಮೀನು ರಫ್ತು ಮಾಡುವುದಕ್ಕೆ ನಿಷೇಧವಿದೆ. ಅದು ಇನ್ನಷ್ಟು ಕಾಲ ಮುಂದುವರಿಸಲು ಅಥಾರಿಟಿ ನಿರ್ಧರಿಸಿದೆ ಎಂದು ವರದಿಯಾಗಿದೆ.
Next Story





