ಕೆಮ್ತೂರು: ನೂತನ ದಾರಿದೀಪಗಳ ಉದ್ಘಾಟನೆ

ಉಡುಪಿ, ಫೆ.10: ಅಲೆವೂರು ಗ್ರಾಪಂ ವ್ಯಾಪ್ತಿಯ ಕೆಮ್ತೂರು ಗ್ರಾಮದಲ್ಲಿ ಪಂಚಾಯತ್ ಅನುದಾನದಲ್ಲಿ ಮುಖ್ಯ ರಸ್ತೆಗೆ ಹೊಸದಾಗಿ ಅಳವಡಿಸಲಾದ ದಾರಿದೀಪಗಳನ್ನು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್ ಇತ್ತೀಚೆಗೆ ಉದ್ಘಾಟಿಸಿದರು.
ಈ ಸಂದರ್ದಲ್ಲಿ ಜಿಪಂ ಸದಸ್ಯ ದಿನಕರ ಬಾಬು, ತಾಪಂ ಸದಸ್ಯೆ ಬೇಬಿ ರಾಜೇಶ್, ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮಿ ಹಂಸರಾಜ್, ಸದಸ್ಯರಾದ ಕೃಷ್ಣ ಜತ್ತನ್ನ, ಹರೀಶ್ ಶೇರಿಗಾರ್, ಶೇಖರ ಆಚಾರ್ಯ, ಸುರೇಶ್ ಬಂಗೇರ, ಪ್ರೇಮ, ಶಾಂತ ನಾಯ್ಕ, ಪಿಡಿಓ ಬೂದ ಪೂಜಾರಿ, ಮಾಜಿ ಸದಸ್ಯರಾದ ಹೇಮಿಕ ಶೆಟ್ಟಿ ಮತ್ತು ಜೋಸೆಫ್ ಕಾರ್ಡೋಜ, ಹಿರಿಯರಾದ ಕೆ.ಸುಂದರ ಶೆಟ್ಟಿ, ಕೆ.ಜಯಾರಮಾ ಶೆಟ್ಟಿ, ಪ್ರಭಾಕರ ಹೆಗ್ಡೆ, ಸಂಜೀವ ಶೆಟ್ಟಿ, ಶ್ರೀಕಾಂತ್ ಭಟ್, ಅಶೋಕ್ ಕುಮಾರ್, ಅಶಿಶ್ ಶೆಟ್ಟಿ, ದೀಪಕ್ ಸನಿಲ್ ಮೊದಲಾದ ವರು ಉಪಸ್ಥಿತರಿದ್ದರು
Next Story





