ನ್ಯೂಝಿಲ್ಯಾಂಡ್ ಕಡಲ ತೀರದಲ್ಲಿ ಸಿಕ್ಕಿ ಹಾಕಿಕೊಂಡಿರುವ 400 ತಿಮಿಂಗಿಲಗಳು

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಫೆ. 10: ನ್ಯೂಝಿಲ್ಯಾಂಡ್‌ನ ಗೋಲ್ಡನ್ ಬೇ ವಲಯದಲ್ಲಿರುವ ‘ಫೇರ್‌ವೆಲ್ ಸ್ಪಿಟ್’ ಸಮುದ್ರ ತೀರದಲ್ಲಿ ಶುಕ್ರವಾರ ಸಿಕ್ಕಿಹಾಕಿಕೊಂಡಿವೆ.
ತಿಮಿಂಗಿಲಗಳನ್ನು ರಕ್ಷಿಸಲು ಕಾರ್ಯಕರ್ತರು ‘ಕಾಲದ ವಿರುದ್ಧದ ಓಟ’ದಲ್ಲಿ ತೊಡಗಿದ್ದಾರಾದರೂ, ಅವುಗಳು ಒಂದರ ನಂತರ ಒಂದರಂತೆ ಪ್ರಾಣ ಬಿಡುತ್ತಿವೆ.ಇಷ್ಟೊಂದು ಸಂಖ್ಯೆಯ ತಿಮಿಂಗಿಲಗಳು ನ್ಯೂಝಿಲ್ಯಾಂಡ್‌ನ ಸಮುದ್ರ ತೀರದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.
ಸೌತ್ ಐಲ್ಯಾಂಡ್ ರಾಜ್ಯದ ಉತ್ತರದ ತುದಿಯಲ್ಲಿರುವ ಫೇರ್‌ವೆಲ್ ಸ್ಪಿಟ್ ಸಮುದ್ರ ತೀರಕ್ಕೆ 416 ಪೈಲಟ್ ತಿಮಿಂಗಿಲಗಳು ಈಜಿಕೊಂಡು ಬಂದು ಸೇರಿವೆ ಎಂದು ಸಂರಕ್ಷಣಾ ಇಲಾಖೆಯ ಅಧಿಕಾರಿ ಆ್ಯಂಡ್ರೂ ಲ್ಯಾಮ್ಸನ್ ಹೇಳಿದರು.
ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರುವ ವೇಳೆಗೆ ಸುಮಾರು 70 ಶೇಕಡದಷ್ಟು ತಿಮಿಂಗಿಲಗಳು ಸತ್ತಿವೆ. ಉಳಿದವುಗಳನ್ನು ಸಮುದ್ರಕ್ಕೆ ಬಿಟ್ಟು ಬಿಡಲು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.
Next Story





