ಫೋನ್‌ನಲ್ಲಿ ಪ್ರಾರ್ಥನೆ ವೀಡಿಯೊ: ಕೆನಡ ಮುಸ್ಲಿಮ್‌ಗೆ ಅಮೆರಿಕ ಪ್ರವೇಶ ನಿಷೇಧ

ಜಿದ್ದಾ, ಫೆ. 10: ಕೆನಡದ ಮುಸ್ಲಿಮ್ ಮಹಿಳೆಯೊಬ್ಬರಿಗೆ ಅವರ ಧಾರ್ಮಿಕ ನಂಬಿಕೆಯ ಬಗ್ಗೆ ಪ್ರಶ್ನಿಸಿದ ಬಳಿಕ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಬಗ್ಗೆ ಆಕೆಯ ಅಭಿಪ್ರಾಯ ಕೇಳಿದ ಬಳಿಕ, ಅಮೆರಿಕ ಪ್ರವೇಶವನ್ನು ನಿರಾಕರಿಸಲಾಗಿದೆ.
ಮೊರೊಕ್ಕೊ ಸಂಜಾತ ಕೆನಡದ ಪ್ರಜೆ ಫದ್ವಾ ಅಲಾವುಯಿ ಮತ್ತು ಅವರ ಸೋದರ ಸಂಬಂಧಿ ಗಡಿಗೆ ಆಗಮಿಸಿದ ಬಳಿಕ, ಅವರಿಂದ ಫೋನ್‌ಗಳು ಮತ್ತು ಪಾಸ್‌ವರ್ಡ್‌ಗಳನ್ನು ಕೇಳಲಾಯಿತು. ಬಳಿಕ ಸುದೀರ್ಘ ವಿಚಾರಣೆಗೆ ಗುರಿಪಡಿಸಲಾಯಿತು.
ಅವರ ಫೋನ್‌ಗಳಲ್ಲಿ ಅರೇಬಿಕ್ ವೀಡಿಯೊಗಳು ಪತ್ತೆಯಾದವು. ಅವುಗಳು ಇಸ್ಲಾಮಿಕ್ ಪ್ರಾರ್ಥನೆಗಳು ಎಂಬುದಾಗಿ ಅಲಾವುಯಿ ಉತ್ತರಿಸಿದರು.
ಇಬ್ಬರು ಮಹಿಳೆಯರನ್ನು ಬಳಿಕ ಬೇರ್ಪಡಿಸಿ ಪ್ರತ್ಯೇಕ ಕೋಣೆಗಳಲ್ಲಿ ವಿಚಾರಣೆಗೆ ಗುರಿಪಡಿಸಲಾಯಿತು ಹಾಗೂ ಒಂದು ಗಂಟೆಯ ಬಳಿಕ ಅವರನ್ನು ವಾಪಸ್ ಕಳುಹಿಸಲಾಯಿತು ಎಂದು ಅಲಾವುಯಿ ಸಿಬಿಸಿ ನ್ಯೂಸ್‌ಗೆ ಹೇಳಿದರು.
Next Story





