ಉಳ್ಳಾಲದಲ್ಲಿ ‘ಸುನ್ನೀ ಸಂದೇಶ’ ಪ್ರಚಾರ ರ್ಯಾಲಿಗೆ ಚಾಲನೆ

ಮಂಗಳೂರು,ಫೆ.10 : ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಹೊರ ತರುವ ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕೋತ್ಸವದ ಫೆ.18 ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ಪ್ರಚಾರಾರ್ಥ ಶುಕ್ರವಾರ ದ.ಕ.ಮತ್ತು ಚಿಕ್ಕಮಗಳೂರು ಉಭಯ ಜಿಲ್ಲೆಯಲ್ಲಿ ಹಮ್ಮಿಕೊಂಡ ವಾಹನ ಜಾಥಾಕ್ಕೆ ಇಂದು ಉಳ್ಳಾಲದ ದರ್ಗಾ ಝಿಯಾರತ್‌ನೊಂದಿಗೆ ಚಾಲನೆ ದೊರೆಯಿತು.
ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿಯವರು ಜಾಥಾ ನಾಯಕ ಕೆ.ಎಲ್. ಉಮರ್ ದಾರಿಮಿ ಹಾಗೂ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮತ್ತು ಸಿದ್ದಿಕ್ ಫೈಝಿ ಕರಾಯಾ ಅವರಿಗೆ ಸಮಸ್ತ ಪತಾಕೆಯನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹಾ ಹಾಜಿ ಸಯ್ಯದ್ ಇಬ್ರಾಮ್ ತಂಙಳ್ ಉಳ್ಳಾಲ, ಅಮಿರ್ ಹಾಜಿ, ದರ್ಗಾ ಉಪಾಧ್ಯಕ್ಷರಾದ ಬಾವಾ ಅಹ್ಮದ್, ಯು.ಕೆ.ಇಸ್ಮಾಯೀಲ್ ಉಳ್ಳಾಲ, ಮುಸ್ಕಾಫಾ ಮಂಚಿಲಾ, ಜಮಾಲ್, ಇಬ್ರಾಹೀಂ ಹಾಜಿ, ಫೈರೋಸ್ ಅಹ್ಮದ್, ಉಳ್ಳಾಲ ನಗರ ಸಭೆಯ ಕೌನ್ಸಿಲರ್ ಮುಸ್ತಫಾ ಅಬ್ದುಲ್ಲಾ, ಮೇಲಂಗಡಿ ಮಸೀದಿ ಅಧ್ಯಕ್ಷ ಫಾರೂಖ್ ಉಳ್ಳಾಲ, ಮುಹಮ್ಮದ್ ದೇರಿಕಟ್ಟೆ, ಹನೀಫ್ ಉಳ್ಳಾಲ, ಅಶ್ರಫ್ ಅಬುದಾಭಿ, ಯು.ಕೆ. ಮುಸ್ತಫಾ ಉಳ್ಳಾಲ, ಮಜೀದ್ ಹಾಜಿ ಸಿತಾರ್, ನೌಶಾದ್ ಹಾಜಿ ಸುರಲ್ಪಾಡಿ, ಅಬ್ದುಲ್ ಮಜೀದ್ ಸುರಲ್ಪಾಡಿ, ಕೆ.ಪಿ.ಯುಸುಫ್ ಕಿನ್ಯಾ, ಬಶೀರ್ ಉಳ್ಳಾಲ, ಆಸಿಫ್ ಅಬ್ದುಲ್ಲಾ ಮೆಲಂಗಡಿ, ಅಲಿಮೋನು ಉಳ್ಳಾಲ, ಮುಷ್ತಾಖ್ ಕುದ್ರೋಳಿ, ಅಬ್ಬು ಹಾಜಿ ಮೊದಿನ್ ಕುದ್ರೋಳಿ, ಎಂ.ಎ. ಅಬ್ದುಲ್ಲಾ ಬೆಲ್ಮಾ, ರಫೀಕ್ ಅಜ್ಜಾವರ, ಲತೀಫ್ ದಾರಿಮಿ ರೆಂಜಾಡಿ, ಸಮದ್ ಅರಳ, ಮುಸ್ತಫಾ ಫೈಝಿ ಕಿನ್ಯಾ ಮೊದಲಾದವರು ಉಪಸ್ಥಿತರಿದ್ದರು.
ಮೊದಲಿಗೆ ಸಿದ್ದೀಕ್ ಫೈಝಿ ಸ್ವಾಗತಿಸಿದರು. ಮುಸ್ತಫಾ ಫೈಝಿ ವಂದಿಸಿದರು.







