ತೆರಿಗೆ ವಂಚಿಸಿ ಅಕ್ರಮವಾಗಿ ಅಡಿಕೆ ಸಾಗಾಟ: ಜಪ್ತಿ
ಕಾರವಾರ, ಫೆ.10: ತೆರಿಗೆ ವಂಚಿಸಿ ಬೇರೆ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಎರಡು ಪ್ರತ್ಯೇಕ ಲಾರಿಗಳಲ್ಲಿದ್ದ ಅಡಿಕೆಯನ್ನು ಡಿಸಿಐಬಿ ಪೊಲೀಸರು ವಶಪಡಿಸಿಕೊಂಡ ಘಟನೆ ಕಾರವಾರದ ಬಿಣಗಾ ಹಾಗೂ ಯಲ್ಲಾಪುರದ ಮಂಚಿಕೇರಿ ಬಳಿ ಶುಕ್ರವಾರ ನಡೆದಿ
ಸುಮಾರು 50 ಲಕ್ಷ ರೂ. ಗೂ ಹೆಚ್ಚು ವೌಲ್ಯದ ಅಡಿಕೆ ಹಾಗೂ ಎರಡು ಲಾರಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿ ಮಂಗಳೂರಿನಿಂದ ಮುಂಬೈ ಹಾಗೂ ನಾಗಪುರಕ್ಕೆ ಅಡಿಕೆಯನ್ನು ಸಾಗಿಸಲಾಗುತ್ತಿತ್ತು.
ಆದರೆ, ತೆರಿಗೆ ವಂಚಿಸಿರುವ ಬಗ್ಗೆ ಮಾಹಿತಿ ಪಡೆದು ಡಿಸಿಐಬಿ ಪೊಲೀಸರು ಇನ್‌ಸ್ಪೆಕ್ಟರ್ ಆಂಜನೇಯ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಅಡಿಕೆ ಸಾಗಾಟ ಮಾಡುವವರ ಬಳಿ ಯಾವುದೇ ಅಧಿಕೃತ ದಾಖಲೆಗಳು ಇರಲಿಲ್ಲ. ಈ ಕಾರಣದಿಂದಾಗಿ ಎರಡು ಲಾರಿ ಹಾಗೂ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ.
ಯಲ್ಲಾಪುರ ಹಾಗೂ ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





