ಕೊಹ್ಲಿ ಸ್ಥಿರ ಪ್ರದರ್ಶನಕ್ಕೆ ಆತ್ಮವಿಶ್ವಾಸವೇ ಕಾರಣ: ಗವಾಸ್ಕರ್

ಹೊಸದಿಲ್ಲಿ, ಫೆ.10: ‘‘ವಿರಾಟ್ ಓರ್ವ ಕ್ರಿಕೆಟ್ ಲೆಜಂಡ್ ಆಗುವ ಹಾದಿಯಲ್ಲಿದ್ದಾರೆ. ಅವರು ಎಲ್ಲ ದಾಖಲೆಯನ್ನು ಮುರಿದು ಕಟ್ಟುತ್ತಿದ್ದಾರೆ. ಅವರ ಸ್ಥಿರ ಪ್ರದರ್ಶನಕ್ಕೆ ಆತ್ಮವಿಶ್ವಾಸವೇ ಕಾರಣ’’ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಈ ಋತುವಿನಲ್ಲಿ ಸ್ವದೇಶದಲ್ಲಿ ರನ್ ಹೊಳೆ ಹರಿಸಿರುವ ಕೊಹ್ಲಿ 17 ಇನಿಂಗ್ಸ್‌ಗಳಲ್ಲಿ 1105 ರನ್ ಗಳಿಸಿದ್ದ ಸೆಹ್ವಾಗ್ ದಾಖಲೆಯನ್ನು ಮುರಿದರು. ಕೊಹ್ಲಿಯ ಭರ್ಜರಿ ಫಾರ್ಮ್‌ನ್ನು ಉಲ್ಲೇಖಿಸಿ ಗವಾಸ್ಕರ್ ಮೇಲಿನಂತೆ ಅಭಿಪ್ರಾಯಪಟ್ಟರು.
ದ್ವಿಶತಕದ ಗಳಿಕೆಯಲ್ಲಿ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ರಿಕಿ ಪಾಂಟಿಂಗ್‌ರ ಸೆಡ್ಡು ಹೊಡೆಯುತ್ತಿರುವ ಕೊಹ್ಲಿಗೆ ಈ ಮೂವರ ದಾಖಲೆ ಮುರಿಯಲು ಇನ್ನೆರಡು ದ್ವಿಶತಕದ ಅಗತ್ಯವಿದೆ.
Next Story





