ಶ್ರೀಗಂಧದ ಮರ ಕಳ್ಳರಪಾಲು
ಮುಂಡಗೋಡ, ಫೆ.10: ಲೋಕೋಪಯೋಗಿ ಪ್ರವಾಸಿ ಮಂದಿರದ ಆವರಣದಲ್ಲಿರುವ ಶ್ರೀಗಂಧದ ಮರವೊಂದನ್ನು ಕಡಿದು ಸಾಗಿಸಿದ ಹಾಗೂ ಎಸಿಎಫ್ ಮನೆಯ ಹಿಂಬದಿಯಲ್ಲಿನ ಎರಡು ಶ್ರೀಗಂಧದ ಮರಗಳನ್ನು ಅರಣ್ಯಗಳ್ಳರು ಕಡಿದು ಸಾಗಿಸಲು ಯತ್ನಿಸಿದ್ದಾರೆ. ಕಡಿದ ಶ್ರೀಗಂಧದ ಮರವನ್ನು ಅಲ್ಲಿಯೇ ಬಿಟ್ಟು ಹೋದ ಘಟನೆ ಮುಂಡಗೋಡ ಪಟ್ಟಣದಲ್ಲಿ ಬುಧವಾರ ನಡೆದಿದೆ ಎಂದು ಹೇಳಲಾಗಿದೆ
ಎಸಿಎಫ್ ಮನೆಯ ಹಿಂಬದಿಯಲ್ಲಿರುವ ಮರಗಳನ್ನು ಕಡಿದು ಸಾಗಿಸುವ ಹಂತದಲ್ಲಿದ್ದಾಗ ಶಬ್ದದಿಂದ ಎಚ್ಚರಗೊಂಡು ಎಸಿಎಫ್ ಹೊರಗೆ ಬರುತ್ತಿದ್ದಂತೆ ಕಡಿದ ಶ್ರೀಗಂಧದ ಮರಗಳನ್ನು ಅಲ್ಲಿಯೇ ಬಿಟ್ಟು ಅರಣ್ಯಗಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅದೇರಾತ್ರಿ ಪಕ್ಕದ ಲೋಕೋಪಯೋಗಿ ಪ್ರವಾಸಿಮಂದಿರದ ಆವರಣದಲ್ಲಿರುವ ಶ್ರೀಗಂಧದ ಮರವೊಂದನ್ನು ಕಡಿದು ಸಾಗಿಸಿದ್ದಾರೆ ಎನ್ನಲಾಗಿದೆ.
Next Story





