ಆಳ್ವಾಸ್ ಪ್ರಕೃತಿ ಚಿಕಿತ್ಸೆ, ಯೋಗ ವಿಜ್ಞಾನ ಕಾಲೇಜಿಗೆ ಪ್ರಥಮ ರ‍್ಯಾಂಕ್
.jpg)
ಮೂಡುಬಿದಿರೆ,ಫೆ.10: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿಯ ಬಿಎನ್‌ವೈಎಸ್ ಪರೀಕ್ಷೆಯಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ, ಯೋಗ ವಿಜ್ಞಾನ ಕಾಲೇಜು ಸತತ ಎರಡನೇ ಭಾರಿ ಪ್ರಥಮ ರ‍್ಯಾಂಕ್ ಪಡೆದಿದೆ.
ಆಳ್ವಾಸ್ ಬಿಎನ್‌ವೈಸ್ ವಿದ್ಯಾರ್ಥಿನಿ ಹನಿಮ.ಸಿ ಶೇ. 80.70 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಸುಪ್ರಿತಾ ಡಿ. ಶೇ.74.59 ಅಂಕಗಳೊಂದಿಗೆ 7ನೇ ರ‍್ಯಾಂಕ್ ಪಡೆದಿದ್ದಾರೆ. ರ‍್ಯಾಂಕ್ ವಿಜೇತರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ಕಳೆದ ವರ್ಷ ಆಳ್ವಾಸ್ ಬಿಎನ್‌ವೈಸ್ ವಿದ್ಯಾರ್ಥಿನಿ ಪೂಜಾ ಪ್ರಥಮ ರ‍್ಯಾಂಕ್ ಪಡೆದಿದ್ದರು.
Next Story





