ಬೆಂಗಳೂರು ಐಐಎಂಗೆ ನಿರ್ದೇಶಕರಾಗಿ ರಘುರಾಂ
ಹೊಸದಿಲ್ಲಿ, ಫೆ.10: ಐಐಎಂ ಬೆಂಗಳೂರು ಸೇರಿದಂತೆ 10 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ)ಗಳಿಗೆ ನಿರ್ದೇಶಕರನ್ನು ಸರಕಾರ ನೇಮಿಸಿದ್ದು ಪ್ರೊ.ಜಿ.ರಘುರಾಂ ಅವರು ಐಐಎಂ ಬೆಂಗಳೂರು ಇದರ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ರಘುರಾಂ ಪ್ರಸ್ತುತ ಐಐಎಂ ಹೈದರಾಬಾದಿನ ಸಾರ್ವಜನಿಕ ವ್ಯವಸ್ಥೆ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭರತ್ ಭಾಸ್ಕರ್(ಐಐಎಂ ರಾಯ್‌ಪುರ್), ಶೈಲೇಂದ್ರ ಸಿಂಗ್(ಐಐಎಂ ರಾಂಚಿ), ಧೀರಜ್ ಶರ್ಮ (ಐಐಎಂ ರೋಹ್ಟಕ್), ಮಹಾದೇವ್ ಪ್ರಸಾದ್ ಜೈಸ್ವಾಲ್(ಐಐಎಂ ಸಂಬಲ್‌ಪುರ), ಎಲ್.ಎಸ್.ಮೂರ್ತಿ (ಐಐಎಂ ನಾಗ್‌ಪುರ), ಪ್ರೊ. ಗಣೇಶನ್ ಕಣ್ಣಬಿರನ್(ಐಐಎಂ ಬೋಧ್‌ಗಯ ), ಪ್ರೊ. ನೀಲು ರೋಮೆಟ್ರ(ಐಐಎಂ ಸಿರ್ಮೋರ್), ಚಂದ್ರಶೇಖರ ಮೈಲಾವರಪು (ಐಐಎಂ ವಿಶಾಖಪಟ್ಣಂ), ಭೀಮರಾಯ ಮೇಟ್ರಿ (ಐಐಎಂ ತಿರುಚಿನಾಪಳ್ಳಿ) ಅವರು ಇತರ ನಿರ್ದೇಶಕರು. ದೇಶದಲ್ಲಿ ಒಟ್ಟು 20 ಐಐಎಂಗಳಿವೆ. ಇವರ ನೇಮಕವನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದ್ದು ಸೇವಾವಧಿ ಐದು ವರ್ಷ ಅಥವಾ ಹುದ್ದೆದಾರನಿಗೆ 65 ವರ್ಷ ಆಗುವವರೆಗೆ ಇರುತ್ತದೆ.





