ಕಡಲ ತೀರದಲ್ಲಿ ತಿಮಿಂಗಿಲಗಳು..!
ನ್ಯೂಝಿಲ್ಯಾಂಡ್‌ನ ಗೋಲ್ಡನ್ ಬೇ ವಲಯದಲ್ಲಿರುವ ‘ಫೇರ್‌ವೆಲ್ ಸ್ಪಿಟ್’ ಸಮುದ್ರ ತೀರದಲ್ಲಿ ಶುಕ್ರವಾರ 400ಕ್ಕೂ ಅಧಿಕ ತಿಮಿಂಗಿಲಗಳು ಸಿಕ್ಕಿಹಾಕಿಕೊಂಡಿವೆ. ತಿಮಿಂಗಿಲಗಳನ್ನು ರಕ್ಷಿಸಲು ಕಾರ್ಯಕರ್ತರು ‘ಕಾಲದ ವಿರುದ್ಧದ ಓಟ’ದಲ್ಲಿ ತೊಡಗಿದ್ದಾರಾದರೂ, ಅವುಗಳು ಒಂದರ ನಂತರ ಒಂದರಂತೆ ಪ್ರಾಣ ಬಿಡುತ್ತಿವೆ. ಇಷ್ಟೊಂದು ಸಂಖ್ಯೆಯ ತಿಮಿಂಗಿಲಗಳು ನ್ಯೂಝಿಲ್ಯಾಂಡ್‌ನ ಸಮುದ್ರ ತೀರದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.
Next Story





