ಜೂನ್ 30ರೊಳಗೆ ಪಡಿತರ ಅಂಗಡಿಗಳನ್ನು ಆಧಾರ್ ಬೆಂಬಲಿತವಾಗಿಸಲು ಸರಕಾರ ಸಿದ್ಧ
ಹೊಸದಿಲ್ಲಿ, ಫೆ.10: ಸಾರ್ವಜನಿಕ ಹಂಚಿಕೆ ವ್ಯವಸ್ಥೆಯಡಿ ಇರುವ ದೇಶದ ಎಲ್ಲಾ ಪಡಿತರ ಅಂಗಡಿಗಳನ್ನು ಈ ವರ್ಷದ ಜೂನ್ 30ರ ಒಳಗೆ ಆಧಾರ್ ಬೆಂಬಲಿತವಾಗಿಸಲು ಸರಕಾರ ಸಿದ್ಧ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಜೂನ್ 30ರ ಒಳಗೆ ಎಲ್ಲಾ ಪಡಿತರ ಅಂಗಡಿಗಳಿಗೆ ಆಧಾರ್ ಬೆಂಬಲ ನೀಡುವ ನಿಟ್ಟಿನಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆಯ ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದರು. ಗುಜರಾತ್, ಆಂಧ್ರಪ್ರದೇಶ ಮತ್ತು ರಾಜಸ್ಥಾನದ ಪಡಿತರ ಅಂಗಡಿಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಅಳವಡಿಸಲಾಗಿದೆ. ಗುಜರಾತ್‌ನಲ್ಲಿ ಪಡಿತರ ಅಂಗಡಿಗಳಲ್ಲಿ ಹೆಬ್ಬೆಟ್ಟು ಒತ್ತುವ ಮೂಲಕ ಪಾವತಿ ವ್ಯವಸ್ಥೆ ಮಾಡಲಾಗಿದ್ದು ಇದನ್ನು ಆಧಾರ್‌ಗೆ ಜೋಡಿಸಲಾಗಿದೆ. ಜೂನ್ 30ರ ಒಳಗೆ ದೇಶದ ಎಲ್ಲಾ ನಾಗರಿಕರನ್ನೂ ಆಧಾರ್ ವ್ಯವಸ್ಥೆಯಡಿ ತರಲು ಸರಕಾರ ನಿರ್ಧರಿಸಿದೆ ಎಂದ ಅವರು, ಆದರೆ ಈ ಬಗ್ಗೆ ಜನರನ್ನು ಬಲವಂತ ಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Next Story





