ಭಾರತ ವಿರುದ್ಧ ಏಕೈಕ ಟೆಸ್ಟ್: ಬಾಂಗ್ಲಾದೇಶ 322/6

ಹೈದರಾಬಾದ್, ಫೆ.11: ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ 3ನೆ ದಿನದಾಟದಂತ್ಯದಲ್ಲಿ ಬಾಂಗ್ಲಾದೇಶ ತಂಡ 6 ವಿಕೆಟ್ ನಷ್ಟಕ್ಕೆ 322 ರನ್ ಕಲೆ ಹಾಕಿದೆ.
ಭಾರತದ ಮೊದಲ ಇನಿಂಗ್ಸ್ 687 ರನ್‌ಗೆ ಉತ್ತರಿಸಹೊರಟ ಬಾಂಗ್ಲಾದೇಶಕ್ಕೆ ಶಾಕಿಬ್ ಅಲ್ ಹಸನ್(82), ನಾಯಕ ಮುಶ್ಫಿಕುರ್ರಹೀಂ(ಅಜೇಯ 81) ಹಾಗೂ ಮೆಹದಿ ಹಸನ್ ಮಿರಾಝ್(ಅಜೇಯ 51) ಅರ್ಧಶತಕ ಕೊಡುಗೆಯ ಮೂಲಕ ಆಧರಿಸಿದರು.
ಬಾಂಗ್ಲಾದೇಶ ಒಂದು ಹಂತದಲ್ಲಿ 109 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ 5ನೆ ವಿಕೆಟ್‌ಗೆ 107 ರನ್ ಜೊತೆಯಾಟ ನಡೆಸಿದ ಶಾಕಿಬ್-ರಹೀಂ ತಂಡವನ್ನು ಆಧರಿಸಿದರು. ಶಾಕಿಬ್(82 ರನ್, 103 ಎಸೆತ, 14 ಬೌಂಡರಿ) ಶತಕ ವಂಚಿತರಾದ ಬಳಿಕ ಶಬ್ಬೀರ್ರಹ್ಮಾನ್(16) ಬೇಗನೆ ಔಟಾದರು.
ಆಗ 7ನೆ ವಿಕೆಟ್‌ಗೆ ಮಿರಾಝ್(ಅಜೇಯ 51) ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 87 ರನ್ ಸೇರಿಸಿದ ನಾಯಕ ರಹೀಂ ತಂಡದ ಮೊತ್ತವನ್ನು 3ನೆ ದಿನದಾಟದಂತ್ಯಕ್ಕೆ 322ಕ್ಕೆ ತಲುಪುವಂತೆ ಮಾಡಿದರು.
ಭಾರತದ ಪರ ಉಮೇಶ್ ಯಾದವ್(2-72) ಯಶಸ್ವಿ ಬೌಲರ್ ಎನಿಸಿಕೊಂಡರು.
Next Story





