ಬಡ ಮಹಿಳೆಗೆ ಲಯನ್ಸ್ ಕ್ಲಬ್‌ನಿಂದ ಮನೆ ಹಸ್ತಾಂತರ

ಮೂಡುಬಿದಿರೆ,ಫೆ.11 : ಅಳಿಯೂರು ಸಮೀಪದ ಕುಕ್ಕೆರಡ್ಕ ಎಂಬಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬಡ ಮಹಿಳೆ ಸುಮತಿ ಶೆಟ್ಟಿ ಎಂಬವರಿಗೆ 3.5 ಲಕ್ಷ ರೂ. ವೆಚ್ಚದಲ್ಲಿ ಲಯನ್ಸ್ ಕ್ಲಬ್ ಹಾಗೂ ದಾನಿಗಳ ನೆರವಿನಿಂದ ಮನೆ ನಿರ್ಮಿಸಿಕೊಡಲಾಗಿದ್ದು, ಅದರ ಹಸ್ತಾಂತರವು ಇತ್ತೀಚಿಗೆ ನಡೆಯಿತು.
ಲಯನ್ಸ್ ರಾಜ್ಯಪಾಲ ಅರುಣ್ ಕುಮಾರ್ ಶೆಟ್ಟಿ ಅವರು ಮನೆ ಹಸ್ತಾಂತರಿಸಿದರು. ರುಕ್ಕಯ್ಯ ಪೂಜಾರಿ ದಂಪತಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರಮಥ್ ಕುಮಾರ್, ವಲಯಾಧ್ಯಕ್ಷ ಆಂಡ್ರ್ಯೂ ಡಿಸೋಜಾ, ಮೂಡುಬಿದಿರೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಕೆ.ಎನ್. ಶೆಟ್ಟಿ, ಖಜಾಂಚಿ ಮುರಳೀಧರನ್ ಪಿ.ಆರ್., ಶಿರ್ತಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್, ನಾರಾಯಣ ಸೆಮಿನಾ, ಅರುಣ್ ಶೆಟ್ಟಿ, ಸತೀಶ್ ವಿ. ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





