Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಧ್ಯಪ್ರದೇಶದ ಐಎಸ್‌ಐ ಏಜಂಟ್‌ಗಳಿಗೆ...

ಮಧ್ಯಪ್ರದೇಶದ ಐಎಸ್‌ಐ ಏಜಂಟ್‌ಗಳಿಗೆ ಸಮಸ್ಯೆಯಾಗದ ನೋಟು ರದ್ದತಿ

ಪಾಕ್‌ನಿಂದಲೇ ಐಡಿಯಾ ಪಡೆದ ಬಲರಾಮ ಸಿಂಗ್

ವಾರ್ತಾಭಾರತಿವಾರ್ತಾಭಾರತಿ11 Feb 2017 7:04 PM IST
share
ಮಧ್ಯಪ್ರದೇಶದ ಐಎಸ್‌ಐ ಏಜಂಟ್‌ಗಳಿಗೆ ಸಮಸ್ಯೆಯಾಗದ ನೋಟು ರದ್ದತಿ

ಭೋಪಾಲ,ಫೆ.11: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಮಧ್ಯಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಬಂಧಿಸಿರುವ ಆರೋಪಿಗಳ ಐಎಸ್‌ಐ ನಿರ್ವಾಹಕರಿಗೂ ನೋಟು ರದ್ದತಿಯ ಪರಿಣಾಮದಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಗೊತ್ತಿತ್ತು! ಆರೋಪಿಗಳ ಪೈಕಿ ಓರ್ವನಾಗಿರುವ ಬಲರಾಮ ಸಿಂಗ್ ನ.8ರ ನೋಟು ರದ್ದತಿಯ ಬಳಿಕ ನಗದು ಹಣದ ಕೊರತೆ ಕಾಡುತ್ತಿರುವ ಬಗ್ಗೆ ತನ್ನ ಪಾಕ್ ನಿರ್ವಾಹಕನ ಬಳಿ ಗೋಳು ತೋಡಿಕೊಂಡಿದ್ದಾಗ ಆತ,‘‘ ಸಣ್ಣ ಸಣ್ಣ ಅಂಗಡಿಗಳನ್ನು ತೆರೆಯುವಂತೆ ಮತ್ತು ಅಲ್ಲಿಂದ ಆದಾಯ ಬಂದಂತೆ ತೋರಿಸು ’’ಎಂದು ಸಲಹೆ ನೀಡಿದ್ದ.

ಕಳೆದ ಎರಡು ತಿಂಗಳುಗಳಲ್ಲಿ ಭದ್ರತಾ ಏಜನ್ಸಿಗಳು ಸಿಂಗ್ ಮತ್ತು ಆತನ ಪಾಕ್ ನಿರ್ವಾಹಕನ ನಡುವಿನ ದೂರವಾಣಿ ಸಂಭಾಷಣೆಗಳನ್ನು ಕದ್ದು ಆಲಿಸಿದ್ದವು ಮತ್ತು ಈ ಸಂದರ್ಭ ನೋಟು ರದ್ದತಿಯ ಸಂಕಷ್ಟದಿಂದ ಪಾರಾಗುವ ಮತ್ತು ಆದಾಯ ತೆರಿಗೆ ಇಲಾಖೆಗೆ ವಂಚಿಸುವ ಬಗ್ಗೆ ಸಿಂಗ್‌ಗೆ ಧಾರಾಳ ಸಲಹೆಗಳನ್ನು ನೀಡಿದ್ದು ಬೆಳಕಿಗೆ ಬಂದಿತ್ತು.

 ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸುಹಾಶ್ ಗ್ರಾಮದ ನಿವಾಸಿಯಾಗಿರುವ ಬಲರಾಮ ಸಿಂಗ್(26) ವಿದ್ಯಾಭ್ಯಾಸವನ್ನು ಅರ್ಧಕ್ಕೇ ತೊರೆದಿದ್ದು, ಸತ್ನಾದಲ್ಲಿ ಬಾಡಿಗೆ ಮನೆ ಯೊಂದರಲ್ಲಿ ವಾಸವಿದ್ದ. 18 ಎಕರೆ ಭೂಮಿಯ ಮಾಲಕನಾಗಿರುವ ತಂದೆಗೆ ಸಿಂಗ್ ಏನು ಮಾಡುತ್ತಿದ್ದಾನೆ ಮತ್ತು ಆತನ ಐಷಾರಾಮಿ ಜೀವನಕ್ಕೆ ಹಣದ ಮೂಲ ಯಾವುದು ಎನ್ನುವುದು ಗೊತ್ತಿರಲಿಲ್ಲ.

ಎರಡು ವರ್ಷಗಳ ಹಿಂದೆ ಗಡಿಯಾಚೆಯ ಲಾಟರಿ ವಂಚನೆಯ ಭಾಗವಾಗಿದ್ದ ಬಲರಾಮ ಸಿಂಗ್‌ನನ್ನು ಪಾಕಿಸ್ತಾನದ ಐಎಸ್‌ಐ ನಿರ್ವಾಹಕರು ಭಾರತದಲ್ಲಿರುವ ತಮ್ಮ ಏಜಂಟ್‌ಗಳಿಗೆ ಹಣವನ್ನು ತಲುಪಿಸುವ ಕಾರ್ಯಕ್ಕೆ ಬಳಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದ ನವಂಬರ್‌ನಲ್ಲಿ ಜಮ್ಮುವಿನಲ್ಲಿ ಇಬ್ಬರು ಶಂಕಿತ ಐಎಸ್‌ಐ ಏಜಂಟ್‌ಗಳಾದ ಸತ್ವಿಂದರ್ ಸಿಂಗ್ ಮತ್ತು ದಾದು ಅಲಿಯಾಸ್ ಲಕಿ ಅವರ ಬಂಧನ ಪ್ರಕರಣದ ತನಿಖೆ ಸಂದರ್ಭ ಬಲರಾಮ ಸಿಂಗ್ ಹೆಸರು ಮುನ್ನೆಲೆಗೆ ಬಂದಿತ್ತು. ಸತ್ವಿಂದರ್ ಸಿಂಗ್ ಮತ್ತು ಲಕಿ ಮಹತ್ವದ ಭದ್ರತಾ ಮಾಹಿತಿಗಳನ್ನು ವಾಟ್ಸಾಪ್ ಗುಂಪುಗಳ ಮೂಲಕ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.

ಬಂಧಿತರ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಿದಾಗ ಸತ್ವಿಂದರ್‌ನ ಬ್ಯಾಂಕ್ ಖಾತೆಗೆ ಸತ್ನಾದಲ್ಲಿ ಹಣ ಜಮೆಯಾಗುತ್ತಿರುವುದು ಬಹಿರಂಗಗೊಂಡಿತ್ತು. ಸತ್ನಾದ ಬ್ಯಾಂಕಿನಿಂದ ಡಿಪಾಸಿಟ್ ಸ್ಲಿಪ್ ಪಡೆದು ಪರಿಶೀಲಿಸಿದಾಗ ಅದರಲ್ಲಿದ್ದ ಬರಹ ಬಲರಾಮ ಸಿಂಗ್‌ನ ಕೈಬರಹಕ್ಕೆ ತಾಳೆಯಾಗಿತ್ತು. ಕೇಂದ್ರ ಗುಪ್ತಚರ ಇಲಾಖೆ ಮತ್ತು ಮಧ್ಯಪ್ರದೇಶ ಎಟಿಎಸ್ ಆಗಿನಿಂದಲೇ ಆತನ ಮೇಲೆ ನಿಗಾ ಇರಿಸಿದ್ದವು. 

ಪಾಕಿಸ್ತಾನದ ತನ್ನ ನಿರ್ವಾಹಕನ ಸೂಚನೆಯಂತೆ ಬಲರಾಮ ಸಿಂಗ್ 3-4 ಕಂತುಗಳಲ್ಲಿ 20,000 ರೂ.ನಿಂದ 40,000 ರೂ.ವರೆಗಿನ ಹಣವನ್ನು ಸತ್ವಿಂದರ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದ ಎಟಿಎಸ್ ವಿಚಾರಣೆ ಸಂದರ್ಭ ಇದನ್ನು ಬಲರಾಮ ಒಪ್ಪಿಕೊಂಡಿದ್ದಾನೆ. ತಾನೆಂದೂ ಸತ್ವಿಂದರ್‌ನನ್ನು ಭೇಟಿಯಾಗಿಲ್ಲ. ತನಗೆ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನೀಡಲಾಗಿತ್ತು ಮತ್ತು ಅದರಲ್ಲಿ ಹಣವನ್ನು ಜಮಾ ಮಾಡುವಂತೆ ಸೂಚಿಸಲಾಗಿತ್ತು. ಹೀಗೆ ಜಮಾ ಮಾಡಲು ಹಣ ಪಾಕಿಸ್ತಾನದಿಂದ ಹವಾಲಾ ಜಾಲದ ಮೂಲಕ ತನಗೆ ತಲುಪುತ್ತಿತ್ತು ಎಂದು ಆತ ಬಾಯ್ಬಿಟ್ಟಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X